ಗೋಕಾಕ್: ಮಾಹಾಮಾರಿ ಕಿಲ್ಲರ್ ಕೊರೋನಾ ಓಡಿಸಲು ದೇಶಾದ್ಯಂತ ಲಾಕಡೌನ್ ಮಾಡಲಾಗಿದ್ದ ಹಿನ್ನೆಲೆ ನಿಯಮ ಪಾಲಿಸದವರಿಗೆ ಗೋಕಾಕ್ ನಲ್ಲಿ ದಂಡಿಸಿ, ಬಸ್ಕಿ ಶಿಕ್ಷೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಬೇಕಾಬಿಟ್ಟಿ ಮನೆಯಿಂದ ಹೊರಗೆ ಬರುವವರಿಗೆ ಲಾಠಿ ರುಚಿ ತೋರಿಸಲಾಗುತ್ತಿದ್ದು, ಖುದ್ದು ಸಿಪಿಐ ಗೋಪಾಲ್ ರಾಠೋಡ ಫೀಲ್ಡಿಗಿಳಿದು ಲಾಠಿ ಬೀಸುತ್ತಿದ್ದಾರೆ. ಲಾಠಿ ಹಿಡಿದು ಲಾಕಡೌನ್ ಪಾಲಿಸದವರಿಗೆ ಸಿಪಿಐ ಗೋಪಾಲ್ ರಾಠೋಡ ವಾರ್ನಿಂಗ್ ನೀಡುತ್ತಿದ್ದು, ಯಾವುದೇ ಮುಲಾಜಿಲ್ಲದೇ ಲಾಕಡೌನ್ ಅನುಷ್ಠಾನಕ್ಕೆ ಪೊಲೀಸರು ಕ್ರಮ ವಹಿಸುತ್ತಿದ್ದಾರೆ. ಕಿಲ್ಲರ್ ಕೊರೊನಾ ವೈರಸ್ ಸಮುದಾಯದಲ್ಲಿ ಹರಡುವುದನ್ನ ತಡೆಯಲು ಗೋಕಾಕ ಪೊಲೀಸ್ ಹರಸಾಹಸ ಪಡುತ್ತಿದ್ರೆ ಗೋಕಾಕ್ ಜನತೆ ಮಾತ್ರ ಕೊರೊನಾ ವೈರಸ್ ತೀವ್ರತೆಯನ್ನು ಮಾತ್ರ ಅರೆತುಕೊಳ್ಳುತ್ತಿಲ್ಲ. ಇದೇ ವೇಳೆ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಿರಾಣಿ ಅಂಗಡಿ ಮಾಲೀಕನಿಗೆ ಸಿಪಿಐ ಲಾಠಿ ರುಚಿ ತೋರಿಸಿದ್ದು, ಕಿರಾಣಿ ಅಂಗಡಿ ಮಾಲೀಕರು ಶಾಪ್ ಬಂದು ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.