ಕೂಗು ನಿಮ್ಮದು ಧ್ವನಿ ನಮ್ಮದು

ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯುವೆ: ಈರಣ್ಣ ಕಡಾಡಿ

ಗೋಕಾಕ: ನಮ್ಮದು ಕೃಷಿ ಪ್ರಧಾನವಾದ ದೇಶ, ನಾನೊಬ್ಬ ಸಾಮಾನ್ಯ ರೈತನ ಕುಟುಂಬದಲ್ಲಿ ಹುಟ್ಟಿದ್ದರಿಂದ ರೈತರ ಸಂಕಷ್ಟ, ಸಮಸ್ಯೆಗಳನ್ನು ಅರಿತ್ತಿದ್ದೇನೆ. ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡ್ತಿನಿ ಅಂತ ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ನಿಯಮಿತ ಶಾಖೆಗೆ ಬೇಟಿ ನೀಡಿದರು. ಇದೇ ಸಂದರ್ಭದಲ್ಲಿ ಶಾಖೆಯ ಪದಾಧಿಕಾರಿಗಳು ನೂತನ ರಾಜ್ಯಸಭಾ ಸದಸ್ಯರನ್ನು ಸನ್ಮಾಸಿದ್ರು. ನಂತರ ಈರಣ್ಣ ಕಡಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತಾಸಕ್ತಿಗಾಗಿ ರೂಪಿಸಿದ ದ್ವಿಗುಣ ಆದಾಯ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಯನ್ನು ರಾಜ್ಯದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡ್ತಿನಿ ಅಂತಾ ಹೇಳಿದರು. ಅಲ್ಲದೇ ದೇಶದಲ್ಲಿ ರೈತರಿಗೆ ವಿಶೇಷ ಸ್ಥಾನಮಾನ ಇದೆ ರೈತನೇ ದೇಶದಲ ಬೆನ್ನೆಲುಬು ಅಂತಾ ಹೇಳ್ತಾರೆ, ಆದರೆ ವಿದ್ಯಾವಂತರು ಕೃಷಿ ಕ್ಷೇತ್ರದ ಕಡೆಗೆ ಮುಖಮಾಡುತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡಿ ಕೃಷಿ ಆಧಾರಿತ ಹೊಸ ಹೊಸ ತಂತ್ರಜ್ಞಾನಗಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ರೈತರು ಹೆಚ್ಚು ಆದಾಯ ಬರುವಂತೆ ಮಾಡಿ ಆರ್ಥಿಕ ಸಬಲರಾಗಬೇಕು ಅಂತಾ ಹೇಳಿದ್ರು. ಇದೇ ಸಂದರ್ಭದಲ್ಲಿ ಸ್ಥಳಿಯ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ಈರಪ್ಪ ದೇಯಣ್ಣವರ್, ಶ್ರೀಕಾಂತ್ ಕರೆಪ್ಪಗೋಳ, ಮಾಯಪ್ಪ ಬಾಣಸಿ, ರಾಮಪ್ಪ ಮುಧೋಳ, ರಮೇಶ ಬ್ಯಾಗಿ, ವಿಠಲ್ ಕೋಣಿ, ಈಶ್ವರ ಮುದೋಳ, ಸೇರಿದಂತೆ ಹಲವ ಗಣ್ಯರು ಹಾಗೂ ಮಹಾಲಕ್ಷ್ಮಿ ಸೌಹಾರ್ದ ಶಾಖೆಯ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವರು ಭಾಗಿಯಾಗಿದ್ದರು.

error: Content is protected !!