ಕೂಗು ನಿಮ್ಮದು ಧ್ವನಿ ನಮ್ಮದು

ಯಡಿಯೂರಪ್ಪ ಡೊಂಗಿ ರಾಜಕಾರಣಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಗರಂ: ಟಗರು ವಿರುದ್ದ ವಾಗ್ದಾಳಿ

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ. ಯಡಿಯೂರಪ್ಪ ಡೊಂಗಿ ರಾಜಕಾರಣಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಕಟಿಲ್, ಮಾಜಿ ಸಿಎಂ ಸಿದ್ದರಾಮಯ್ಯ ಯೋಗ್ಯತೆ ಏನ್ರಿ ಎಂದು ಪ್ರಶ್ನಿಸಿದ್ದಾರೆ. ಇವರ ಆಡಳಿತದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡ್ರು. ನಮ್ಮ ರಾಜ್ಯದಲ್ಲಿ ಹತ್ತಾರು ಹಂತಕರನ್ನು ಕಂಡಿದಿವಿ.. ವೀರಪ್ಪನ್ ಕಂಡಿದಿವಿ.. ಅದೇ ರೀತಿ ಆಡಳಿತವನ್ನು ನಡೆಸಿದವ್ರು ಇವರು. ಇವರ ಕಾಲದಲ್ಲಿ 21 ಹಿಂದೂ ಕಾರ್ಯಕರ್ತರ ಹತ್ಯೆಯಾಯ್ತು.

ಮಂಗಳೂರು ಜೈಲಿನಲ್ಲಿ ಡಬಲ್ ಮರ್ಡರ್ ಆಯ್ತು.. ಟಿಪ್ಪು ಜಯಂತಿ ಹೆಸರಲ್ಲಿ ಗಲಭೆ ನಡೆಸಿದ್ರು. ಅಲ್ಲದೇ ವೀರಶೈವ-ಲಿಂಗಾಯತ ಹೆಸರಲ್ಲಿ ಸಮಾಜ ಒಡೆದ್ರು. ಅಧಿಕಾರ ಉಳಿಸಿಕೊಳ್ಳಲು ಬ್ರಿಟಿಶರಿಗಿಂತ ಕಟ್ಟ ಕಡೆಯದಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಣ್ಣ ಎಂದ ನಳಿನ್ ಕುಮಾರ್ ಕಟಿಲ್, ಇಂತ ಕೆಟ್ಟ ಮುಖ್ಯಮಂತ್ರಿ ಬೇಡ ಅಂತ ಜನ ಅವರನ್ನು ಮನೆಗೆ ಕಳಿಸಿದಾರೆ ಎಂದು ಟಗರು ಸಿದ್ದರಾಮಯ್ಯ ವಿರುದ್ದ ಗುಡುಗಿದ್ರು. ಅಲ್ಲದೇ ಕಾಂಗ್ರೆಸ್ ಕೀಳು ರಾಜಕೀಯ ಮಾಡ್ತಿದೆ.. ರೈತರನ್ನು ಎತ್ತಿಕಟ್ಟಿ ರಾಷ್ಟದಲ್ಲಿ ಜನವಿರೋಧಿ ರೀತಿಯಲ್ಲಿ ಕೆಲಸ ಮಾಡ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಬೆಂಕಿ ಹಚ್ಚೋದು.. ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡೋದು ಅವರ ಕೆಲಸ ಎಂದಿದ್ದಾರೆ.

error: Content is protected !!