ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಾನದ ಬಗ್ಗೆ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಟ್ಟು ಈಗ ಸಚಿವ ಕೆ.ಎಸ್.ಈಶ್ವರಪ್ಪ ಕಡೆಗೆ ತಿರುಗಿದೆ.ತಮ್ಮ ಬೆಂಬಲಿಗ ಅಂಕುಶ ವಶಿಷ್ಠ ಎಂಬುವರ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿ ಯತ್ನಾಳ, ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ.. ಯತ್ನಾಳ್ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ನೀವು ಹೇಳುವದಾದರೆ ಮೊದಲು ನಿಮ್ಮನ್ನು ಉಚ್ಛಾಟನೆ ಮಾಡಬೇಕು. ತಮ್ಮ ರಾಯಣ್ಣ ಬ್ರಿಗೇಡ್ ಮರೆತು ಹೋಯಿತಾ ಎಂದು ಪ್ರಶ್ನಿಸಿರುವ ಪೋಸ್ಟನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿ ಈಶ್ವರಪ್ಪರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.