ಕೂಗು ನಿಮ್ಮದು ಧ್ವನಿ ನಮ್ಮದು

ಮೈ ನವಿರೇಳಿಸುವ ಆಫ್ ರೋಡ್ ಜೀಪ್ ರ‌್ಯಾಲಿ: ರೋಮಾಂಚನದಿಂದ ಕಣ್ತುಂಬಿಕೊಂಡ ಮಂಜಿನ ನಗರಿ ಜನತೆ

ಮಡಿಕೇರಿ: ಕೆಸರು ತುಂಬಿದ ರಸ್ತೆನಲ್ಲಿ ಮೈನವಿರೇಳಿಸೋ ಜೀಪ್ ರ‌್ಯಾಲಿ, ಶರವೇಗದಲ್ಲಿ ಜೀಪ್ ಓಡಿಸುತ್ತಾ ಗುರಿಯತ್ತ ಮುನ್ನುಗ್ಗೋ ಸವಾರರು. ಹೊಂಡ, ಗುಂಡಿ, ಕೆಸರು, ನೀರು ಲೆಕ್ಕಿಸದೆ ಸಾಗೋ ರೋಮಾಂಚನಕಾರಿ ಸ್ಪರ್ಧೆ. ಕಾಫಿತೋಟಗಳ ನಡುವೆ ನಡೆಯೋ ಎದೆ ನಡುಗಿಸೊ ಆಫ್ ರೋಡ್ ರ‌್ಯಾಲಿಯ ಝಲಕ್ ಹೇಗಿತ್ತು ಅನ್ನೊದರ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ. ಹೌದು.. ರಸ್ತೆಯನ್ನ ಸೀಳಿಕೊಂಡು ಶರವೇಗದಲ್ಲಿ ಜಿಗಿದು ಮಾಯವಾಗೋ ಜೀಪ್ ಗಳೂ, ಸುಂದರ ಹಸಿರ ಸಿರಿಯ ನಡುವೆ ಹರಿಯೋ ನದಿಯಲ್ಲಿ ಜೀಪ್ ಗಳ ಪರದಾಟ. ಕೆಟ್ಟು ನಿಂತ ಜೀಪ್ ಗಳನ್ನ ತಳ್ಳುತ್ತಿರೊ ಜನ್ರು. ಬೆಟ್ಟ ಗುಡ್ಡಗಳನ್ನು ಏರಿ ಹೊರಟ ಸವಾರರು. ಕೆಸರು, ಹಳ್ಳ, ಕೊಳ್ಳ ಯಾವುದನ್ನೂ ಲೆಕ್ಕಿಸದೆ ನಡೆಯೋ ಎದೆ ನಡುಗಿಸೋ ಆಫ್ ರೋಡ್ ರ‌್ಯಾಲಿ. ಇದು ಕೊಡಗಿನ ಮಡಿಕೇರಿ ತಾಲುಕಿನ ಕಕ್ಕಬ್ಬೆಯಲ್ಲಿ ನಡೆದ ಮೈ ನವಿರೇಳಿಸೋ ಜೀಪ್ ರ‌್ಯಾಲಿಯ ರೋಚಕತೆ. ಹೇಳಿಕೇಳಿ ಸಾಹಸಮಯ ಕ್ರೀಡೆಗಳಿಗೆ ಹೆಸರಾದ ಕೊಡಗಿನಲ್ಲಿ ವಾಹನ ರ‌್ಯಾಲಿಗಳೂ ಸಖತ್ ಗಮನಸೆಳೆಯುತ್ತವೆ.

ಕಕ್ಕಬ್ಬೆ ಆಫ್ ಬೀಟ್ ಡ್ರೈವ್ ಹೆಸ್ರಲ್ಲಿ ಆಯೋಜನೆಯಾಗಿದ್ದ ಜಿಪ್ ರ್ಯಾಲಿ ನೆರೆದಿದ್ದವರನ್ನು ರಂಜಿಸಿತ್ತು. ರಸ್ತೆಯೇ ಇಲ್ಲದ ಬೆಟ್ಟ ಗುಡ್ಡಗಳು, ಸಣ್ಣ ಸಣ್ಣ ನದಿ ಹರಿಯುವ ಸ್ಥಳಗಳಲ್ಲಿ ಸಾಗೋ ಈ ಸ್ಪರ್ಧೆ ನೆರೆದಿದ್ದ ಸ್ಪರ್ದಿಗಳಿಗೆ ಸಖತ್ ರೋಮಾಂಚನಕಾರಿ ಅನುಭವ ನೀಡ್ತು. ಸುಮಾರು ಹದಿಮೂರು ಕಿಲೋ ಮೀಟರ್ ಉದ್ದದ ಟ್ರ್ಯಾಕ್ ಸಾಹಸ ಪ್ರಿಯರಿಗೆ ಸಖತ್ ಥ್ರಿಲ್ಲಿಂಗ್ ಅನುಭವ ನೀಡಿತು. ನೀರಿನ ನಡುವೆ, ಕಲ್ಲು ಮಣ್ಣುಗಳ ರಸ್ತೆ ಕಾಡು ರಸ್ತೆಯಲ್ಲಿ ಸಾಗಿದ ರ‌್ಯಾಲಿ ಎದೆ ಎದೆ ಝಲ್ ಎನ್ನಿಸುವಂತಿತ್ತು. ವ್ರೂಂ ವ್ರೂಂ ಎಂದು ಸದ್ದು ಮಾಡುತ್ತಾ.. ಸ್ಪರ್ಧಿಗಳು ಗುರಿಯತ್ತ ವಾಹನ ಚಲಾಯಿಸಿ ಹೋಗುತ್ತಿದ್ದರೆ, ರಸ್ತೆಯನ್ನೇ ಸೀಳಿಹೊರಟ ರಾಕೇಟ್ ಗಳಂತೆ ಭಾಸವಾಗುತ್ತಿತ್ತು. ಸಾಹಸಿಗರಿಗೆ ಪ್ರೋತ್ಸಾಹ ನೀಡಲು, ಕೋವಿಡ್ ನ ಬೇಸರ ಕಳೆಯಲು, ಪರಿಸರ ಜಾಗೃತಿ ಬೆಳೆಸಲು ಆಫ್ ರೋಡ್ ಜೀಪ್ ಡ್ರೈವ್ ಆಯೋಜನೆ ಮಾಡಲಾಗಿತ್ತು. ಕೊಡಗಿನಲ್ಲಿ ಜೀಪ್ ಹಾಗು ಕಾರ್ ರ‌್ಯಾಲಿಗಳಿಗೆ ಕಡಿಮೆಯಿರಲ್ಲ. ಆದ್ರೆ ಮುಂಗಾರು ಮಳೆ ಮುಗಿದು ಭೂಮಿಯೆಲ್ಲಾ ಹಸಿಯಾಗಿರೋ ಈ ಸಂದರ್ಭದಲ್ಲಿ ನಡೆಯೊ ಫೋರ್ ವ್ಹೀಲ್ ಜೀಪ್ ರ‌್ಯಾಲಿ ನಿಜಕ್ಕೂ ದೊಡ್ಡ ಸಾಹಸಮಯ ಯಾತ್ರೆ.

ಒಮ್ಮೆ ಕೆಸರು, ಮತ್ತೊಮ್ಮೆ ಕಡಿದಾದ ರಸ್ತೆ, ಮಗದೊಮ್ಮೆ ಇಳಿಜಾರು ಎಲ್ಲವನ್ನೂ ಕೊಂಚವೂ ಎದೆಗುಂದದೆ ಗುರಿಮುಟ್ಟಿದರೆ ಆತನೇ ಹೀರೋ. ರಾಜ್ಯದ ವಿವಿಧೆಡೆಗಳಿಂದ 80 ಕ್ಕೂ ಹೆಚ್ಚು ಜೀಪ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಚಾಣಾಕ್ಷತೆ ಪ್ರದರ್ಶನ ಮಾಡಿದ್ರು. ಸವಾಲಿನ ದಾರಿಯನ್ನ ಬುದ್ದಿವಂತಿಕೆಯಿಂದ ಎದುರಿಸಿ ಮುನ್ನುಗ್ಗೋ ಸ್ಪರ್ಧಿಗಳು ಕಷ್ಟದ ಹಾದಿಯಲ್ಲಿ ಕಸರತ್ತು ನಡೆಸಿದರು. ವೃತ್ತಿಪರ ಸ್ಪರ್ಧಿಗಳ ಜೊತೆಗೆ ಹವ್ಯಾಸಿ ಸವಾರರೂ ಕೂಡ ತಮ್ಮ ಸಾಮರ್ಥ್ಯ ಪಣಕ್ಕಿಟ್ಟು ಹೋರಾಟ ನಡೆಸಿದರು. ಟ್ರ್ಯಾಕ್ ನಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ಸೆಣಸಾಡಿದ್ದರೆ, ನೆರೆದಿದ್ದವರಿಗೆ ರೋಮಾಂಚನಕಾರಿ ಅನುಭವವಾಗ್ತಿತ್ತು. ಕ್ರೀಡೆಗೆ ಹೆಸರಾದ ಮಂಜಿನ ನಗರಿ ಸಾಹಸಮಯ ಕ್ರೀಡೆಗಳು ಅಂದ್ರೆ ಕೊಂಚ ಹೆಚ್ಚಾಗೆ ಥ್ರಿಲ್ಲಿಂಗ್ ಇರುತ್ತೆ. ಸವಾಲಿನ ಸ್ಪರ್ಧೆಯನ್ನು ಚಾಣಾಕ್ಷತೆಯನ್ನ ಎದುರಿಸಿ ಸಾಗೋ ಸ್ಪರ್ಧೆ ರೋಮಾಂಚಕತೆಯ ಜೊತೆಗೆ, ಎದೆನಡುಗಿಸೋ ಅನುಭವವನ್ನೂ ನೀಡುತ್ತೆ.

ವರದಿ: ಶ್ರೇಯಾ ಕುಂದಗೋಳ, Newz90 Karnataka

error: Content is protected !!