ರಾಯಚೂರ: ಮೃತ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ನೀಡಿದರು. ಹೈದರಾಬಾದ್ ನ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಶೋಕ ಗಸ್ತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತನ ಹೇಳಿದ್ರು. ಅಶೋಕ ಗಸ್ತಿಗೂ ನನಗೂ ಹಳೆ ಪರಿಚಯ. ಪರಿಷತ್ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆ ವೇಳೆ ಅಶೋಕ ಗಸ್ತಿ ನನಗೆ ಫೋನ್ ಮಾಡಿದ್ರು. ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನಗೆ ಪಾರ್ಟಿಯಲ್ಲಿ ಯಾವುದಾರೂ ಸ್ಥಾನ ನೀಡಿ ಅಂತ ಕೇಳಿದ್ರು. ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಮಾಡುವಾಗ ಅಶೋಕ ಗಸ್ತಿ ಹೆಸರು ಬಂತು. ಹೀಗಾಗಿ ಜೆ.ಪಿ.ನಡ್ಡಾ, ಅಮಿತ್ ಶಾ ಹಾಗೂ ಸಿಎಂ ಸೇರಿದಂತೆ ಎಲ್ಲರೂ ಗುರುತಿಸಿ ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಲಾಗಿತ್ತು.
ಆದ್ರೆ ದುರಂತ ಅಶೋಕ ಗಸ್ತಿಯವರು ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕರಿಸುವ ವೇಳೆಯೂ ನನಗೆ ಫೋನ್ ಮಾಡಿದ್ರು. ಅಧಿಕಾರ ಸ್ವೀಕರಿಸಲು ಯಾವಾಗ ಬರಬೇಕೆಂದು ನನಗೆ ಕೇಳಿದ್ರು. ಆಗ ನಾನು ಅವರಿಗೆ ಯಾವ ದಿನಾಂಕ ಪಿಕ್ಸ್ ಆಗಿದೆ ಆವಾಗ ಬನ್ನಿ ಅಂತ ನಾನು ತಿಳಿಸಿದೆ. ಪಾರ್ಲಿಮೆಂಟ್ ವ್ಯವಸ್ಥೆ ಬಗ್ಗೆಯೂ ನನ್ನೊಂದಿಗೆ ಚರ್ಚೆ ಮಾಡಿದ್ರು. ಆದ್ರೆ ಒಂದು ಅಧಿವೇಶನದಲ್ಲಿಯೂ ಭಾಗವಹಿಸದೇ ನಮ್ಮನ್ನೂ ಅಗಲಿದ್ದು ನಮಗೆ ಬಹಳ ನೋವಾಗಿದೆ. ಇನ್ನೂ ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಸ್ಥಾನ ನೀಡುವ ವಿಚಾರದ ಬಗ್ಗೆಯೂ ಪ್ರಹ್ಲಾದ್ ಜೋಷಿ ಪ್ರತಿಕ್ರಿಯೆ ನೀಡಿದ್ದು, ನಾನು ಈಗ ಅಶೋಕ ಗಸ್ತಿ ಕುಟುಂಬಕ್ಕೆ ಸ್ವಾಂತನ ಹೇಳಲು ಬಂದಿದ್ದೇನೆ. ಅಶೋಕ ಗಸ್ತಿಯವರು ಪಕ್ಷಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ರು. ಅದೇ ಗುರುತಿಸಿ ರಾಜ್ಯಸಭಾ ಸ್ಥಾನ ನೀಡಲಾಗಿತ್ತು. ಆದ್ರೂ ಅಶೋಕ ಗಸ್ತಿ ಕುಟುಂಬದೊಂದಿಗೆ ಪಾರ್ಟಿ ಇರುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.