ಬೆಳಗಾವಿ: ಬೆಳಗಾವಿ ಹೊರವಲಯದ ಮಚ್ಚೆ ಗ್ರಾಮದ ಲಕ್ಷ್ಮೀ ನಗರದಲ್ಲಿ ಯುವತಿಯರಿಬ್ಬರನ್ನು ಭರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರದಿಂದ ಕೊಚ್ಚಿ ಯುವತಿಯರ ಹತ್ಯೆ ಮಾಡಲಾಗಿದ್ದು, ಕೊಲೆಯಾದವರು ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮ ಹಾಗೂ ಸುಳಗಾ ಗ್ರಾಮದ ಯುವತಿಯರು ಎಂದು ಗುರುತಿಸಲಾಗಿದೆ.
ರೋಹಿಣಿ (21) ಹಾಗೂ ರಾಜಶ್ರೀ (21) ಕೊಲೆಯಾದ ಯುವತಿಯರಾಗಿದ್ದು, ಇಬ್ಬರು ಯುವತಿಯರು ತಮ್ಮ ಗಂಡಂದಿರ ಜೊತೆಗೆ ಒಂದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಇನ್ನು ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಈ ದಂಪತಿಗಳು ಮಚ್ಚೆ ಗ್ರಾಮದ ಲಕ್ಷ್ಮೀ ನಗರದಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದರು ಎನ್ನಲಾಗುತ್ತಿದ್ದು, ಸಂಜೆ ವೇಳೆ ವಾಕಿಂಗ್ ಗೆಂದು ಹೊರಗಡೆ ತರಳಿದ್ದಾಗ ಬೈಕ್ ಮೇಲೆ ಬಂದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಸಧ್ಯ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಶ್ವಾನ ದಳ ದೌಡಾಯಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.