ಬೆಳಗಾವಿ: ಬೆಳಗಾವಿಯಲ್ಲಿ ಇಷ್ಟು ದಿನ ಬಾಲ ಮುದುರಿಸಿಕೊಂಡಿದ್ದ ನಾಡದ್ರೋಹಿ ಎಂಇಎಸ್ ಈಗ ಮತ್ತೆ ಬಾಲಬಿಚ್ಚಿದೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು ಬೆಳಗಾವಿಯಲ್ಲಿ ಶಾಂತಿ ಕದಡುವ ಎಂಇಎಸ್ ಪುಂಡರು ಇದೀಗ ಮತ್ತೆ ಬಾಲ ಬಿಚ್ಚಿದ್ದಾರೆ. ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಸೌಹಾರ್ದತೆ ಹಾಳು ಮಾಡಲು ಎಂಇಎಸ್ ಮುಂದಾಗಿದೆ. ಎಂಇಎಸ್ ನವರು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ದವಾಗಿ ಕರಾಳ ದಿನ ಆಚರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಮತ್ತೇ ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಿ ಎಂದು ಎಂಇಎಸ್ ನಾಯಕರು ಬೆಳಗಾವಿ ಪೋಲಿಸ್ ಕಮೀಷನರ್ ತ್ಯಾಗರಾಜನಗೆ ಮನವಿ ಸಲ್ಲಿಸಿದ್ದಾರೆ. ಸದ್ಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕೂಡ ಸಮೀಪಿಸುತ್ತಿದ್ದು ಚುನಾವಣೆಯಲ್ಲಿ ಮರಾಠಿ ಭಾಷಿಕರ ಮತ ಸೆಳೆಯಲು ನಾಡದ್ರೋಹಿ ಎಂಇಎಸ್ ಗಡಿ ವಿವಾದ ಮತ್ತು ಭಾಷಾ ವಿವಾದವನ್ನ ಎಳೆದು ತರುತ್ತದೆ. ಆ ಮೂಲಕ ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳತ್ತದೆ. ಹೀಗಾಗಿ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ನಾಡ ವಿರೋಧಿ ಎಂಇಎಸ್ ನ ಕರಾಳ ದಿನ ಆಚರಣೆಗೆ ಅನುಮತಿ ನಿರಾಕರಿಸಿ, ಎಂಇಎಸ್ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.