ಕೂಗು ನಿಮ್ಮದು ಧ್ವನಿ ನಮ್ಮದು

ಮಂಗಳೂರು: ಚಾರ್ಮಾಡಿ ಘಾಟ್ ಬಂದ್|ಆಹಾರವಿಲ್ಲದೇ ಮಂಗಗಳ ಮೂಖರೋದನ

ಚಾರ್ಮಾಡಿ ಘಾಟಿಯಲ್ಲೀಗ ನೀರವ ಮೌನ. ಹೆದ್ದಾರಿ ಬಂದ್ ಆದಬಳಿಕ ಮನುಷ್ಯ, ವಾಹನಗಳ ಪ್ರವೇಶ ಇಲ್ಲದೆ ಅಲ್ಲಿನ ಬೆಟ್ಟಗಳು ಮಂಜು ಹೊದ್ದುಕೊಂಡು ಮಲಗಿಬಿಟ್ಟಿದೆ. ಆದರೆ, ಅಲ್ಲಿನ ಮೂಕ ಪ್ರಾಣಿಗಳ ರೋದನ ಮಾತ್ರ ಹೇಳತೀರದಾಗಿದೆ. ಚಾರ್ಮಾಡಿ ವೀವ್ ಪಾಯಿಂಟ್ ಬಳಿಯಿರುವ ಅಣ್ಣಪ್ಪ ಸ್ವಾಮಿ ಗುಡಿಗೆ ಬಾಗಿಲು ಮುಚ್ಚಿ ತಿಂಗಳು ಕಳೆದಿದೆ. ರಸ್ತೆಯಲ್ಲಿ ಸಂಚಾರ ಇದ್ದಾಗ ಜನರು ಅಲ್ಲಿ ವಾಹನ ನಿಲ್ಲಿಸದೆ ಮುಂದೆ ಹೋಗಲ್ಲ. ವಾಹನ ನಿಲ್ಲಿಸಿದ ಮಂದಿ ಅಲ್ಲಿರುವ ಮಂಗಗಗಳಿಗೆ ಆಹಾರ ನೀಡುತ್ತಿದ್ದರು. ಈಗ ಹಠಾತ್ತಾಗಿ ಜನ ಸಂಚಾರ ನಿಂತೇ ಹೋಗಿದ್ದು ಅಲ್ಲಿನ ಮಂಗಗಳಿಗೆ ಆಹಾರ ಇಲ್ಲದೆ ಪರದಾಡುತ್ತಿವೆ. ಯಾರಾದರೂ ಅಲ್ಲಿಗೆ ಹೋದಲ್ಲಿ ಹಿಂದಿನಿಂದ ಓಡುತ್ತಾ ಬಂದು ಕೈಚಾಚುತ್ತವೆ. ಹಸಿವಿನಿಂದ ರೋದಿಸುತ್ತಾ ತನ್ನ ಮರಿಗಳೊಂದಿಗೆ ಓಡಿಬರುವ ದೃಶ್ಯ ಮನ ಕಲಕುತ್ತವೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕೊಡುವ ಬಾಳೆಹಣ್ಣು, ಬಿಸ್ಕಟ್ ಗಳೇ ಈ ಮಂಗಗಳಿಗೆ ಆಹಾರವಾಗಿತ್ತು. ಆದರೆ, ಈಗ ಒಂದು ತಿಂಗಳಲ್ಲಿ ಎಲ್ಲಿ ನೋಡಿದರೂ ನೀರವ ಮೌನ ಆವರಿಸಿದ್ದು ಬೀದಿ ನಾಯಿಗಳು ಹಾಗೂ ಮಂಗಗಳನ್ನು ಹಸಿವಿನಿಂದ ರೋದಿಸುವಂತೆ ಮಾಡಿದೆ. ಘಾಟ್ ಸಂಚಾರ ಸದ್ಯಕ್ಕೆ ತೆರೆಯುವ ಲಕ್ಷಣ ಇಲ್ಲ.
error: Content is protected !!