ಭಾರಿ ಮಳೆಗೆ ತತ್ತರಿಸಿದ ಹೊಸಪೇಟೆ : ಜನಜೀವನ ಅಸ್ತವ್ಯಸ್ತ
ಹೊಸಪೇಟೆ ನಗರದಲ್ಲಿ ಇಂದು ಸಂಜೆ ಸುರಿದ ಬಾರಿ ಮಳೆ ದೊಡ್ಡ ಅವಾಂತರವನ್ನೇ ಸೃಷ್ಠಿಮಾಡಿದೆ. ಸಂಜೆ ಐದು ಗಂಟೆಗೆ ಪ್ರಾರಂಭವಾದ ಮಳೆ ಏಳು ಗಂಟೆಯವರೆಗೆ ನಿರಂತರವಾಗಿ ಸುರಿದ ಪರಿಣಾಮ ನಗರದ ಕಾಲೇಜು ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಡಬೇಕಾಯಿತು. ಇನ್ನು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕಗಳು ನೀರಿನಲ್ಲಿ ಮುಳುಗಡೆಯಾಗುವುದಲ್ಲದೆ ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನೀರು ಪಾಲಾಗಿವೆ. ಪ್ರಮುಖವಾಗಿ ಫರ್ನಿಚರ್ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ಹೊಟೆಲ್ಗೆ ನುಗ್ಗಿದ ನೀರನ್ನ ಹೊರ ಹಾಕಲು ಮಾಲೀಕರು ಹರ ಸಾಹಸ ಪಟ್ಟರೆ, ಇತ್ತ ಇಂದಿರಾ ನಗರ ಮತ್ತು ತಿರುಮಲಾ ನಗರದ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ದೊಡ್ಡ ಪ್ರಮಾಣದ ನೀರು ಮನೆಯಲ್ಲಿ ನುಗ್ಗಿದ ಹಿನ್ನೆಲೆಯಲ್ಲಿ ನೀರನ್ನ ಹೊರ ಹಾಕಲಾಗದ ಸ್ಥಳೀಯರು ನಗರಸಭೆಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಿಡುವುದು ಸರ್ವೇ ಸಾಮಾನ್ಯವಾಗತ್ತು. ಇನ್ನು ಮನೆಗಳಿಗೆ ಈ ರೀತಿ ನೀರು ನುಗ್ಗುವುದಕ್ಕೆ ಕಾರಣ ಸ್ಥಳೀಯ ನಗರಸಭೆಯ ನಿರ್ಲಕ್ಷ ಎಂದು ಸ್ಥಳೀಯರು ನಗರಸಭೆ ವಿರುದ್ದ ಹರಿ ಹಾಯ್ದಿದ್ದಾರೆ. ನಗರದಲ್ಲಿ ಹಾದು ಹೋಗಿರುವ ರಾಜ ಕಾಲುವೆ ಒತ್ತುವರಿ ಆಗಿದ್ರು ಅಧಿಕಾರಿಗಳು ಸುಮ್ಮನಿದ್ದಾರೆ. ಅಲ್ಲದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣಮಾಡಿ ಹೋಗುತಿದ್ದ ಅಲ್ಪ ಸ್ವಲ್ಪ ನೀರನ್ನ ಕೂಡ ಹೋಗದಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.