ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಭೇಟೆ: 24 ಲಕ್ಷ ಮೌಲ್ಯದ 120 ಕೆಜಿ ಗಾಂಜಾ ವಶ: ಅಂತರಾಜ್ಯ ಡ್ರಗ್ ಪೆಡ್ಲರ್ ಬಂಧನ

ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ್ ನೇತೃತ್ವದ ವಿಶೇಷ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲರ್ ಬಂಧಿಸಲಾಗಿದ್ದು, 24 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 120 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದು, ಮಹಾರಾಷ್ಟ್ರ ರಾಜ್ಯದ ಮಿರಜ್ ನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಗಾಂಜಾ ತುಂಬಿರುವ ಚೀಲಗಳು

ಇನ್ನೂ ಪ್ರಕರಣದ ಸಂಪೂರ್ಣ ಚಿತ್ರಣ ನೋಡೊದಾದ್ರೆ, ದಿನಾಂಕ: 22/09/2020 ರಂದು ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 143/2020
ಕಲಂ 20(ಬಿ) 22 ಎನ್.ಡಿ ಪಿ.ಎಸ್ ಕಾಯ್ದೆ 1985 ನೇದ್ದು ದಾಖಲಾಗಿದ್ದು, ಆರೋಪಿ ವಶೀಮ್
ಶೇಖ ಸಾ: ಮಿರಜ ಇವನಿಗೆ ಬಂಧಿಸಿ ಅವನಿಂದ 2 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಸದರಿ
ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಆಶ್ಪಾಕ್ ಮೈನುದ್ದಿನ್ ಮುಲ್ಲಾ ಸಾ: ದರ್ಗಾ ಚೌಕ ಮಾಳಿಗಲ್ಲಿ ಮಿರಜ ಇವನು ಪರಾರಿ ಆಗಿದ್ದನು. ಸದರಿ ಪ್ರಕರಣವು ಮಹತ್ವದ ಪ್ರಕರಣವಾಗಿದ್ದರಿಂದ, ಮಾನ್ಯ
ಎಸ್.ಪಿ ಸಾಹೇಬರು ಬೆಳಗಾವಿ ರವರು ಪ್ರಕರಣದ ಮುಂದಿನ ತನಿಖೆ ಕುರಿತು

ನಿಂಗನಗೌಡ ಪಾಟೀಲ್. ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್

ಡಿಸಿಐಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಅ.ಪಾಟೀಲ ಇವರಿಗೆ ವಹಿಸಿದ್ದು, ಅದರಂತೆ, ಸದರಿ
ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ ಇವರು ಮತ್ತು ಅವರ ಸಿಬ್ಬಂದಿ ಜನರು ಕೂಡಿ
ಮಾನ್ಯ ಎಸ್.ಪಿ. ಬೆಳಗಾವಿ, ಮತ್ತು ಹೆಚ್ಚುವರಿ ಎಸ್.ಪಿ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪರಾರಿ ಆರೋಪಿತನಾದ ಆಶ್ಪಾಕ್ ಮೈನುದ್ದಿನ್ ಮುಲ್ಲಾ ಸಾ: ದರ್ಗಾ ಚೌಕ ಮಾಳಿ ಗಲ್ಲಿ ಮಿರಜ ಇವನಿಗೆ ಖಚಿತ ಮಾಹಿತಿ ಮೇರಗೆ ವಿಶೇಷ ಕಾರ್ಯಾಚಾರಣೆ ನಡೆಸಿ ಮಿರಜ್‌ದಲ್ಲಿ ಬಂಧಿಸಿ ಸದರಿಯವನಿಗೆ

ಆರೋಪಿ: ಆಶ್ಪಾಕ್ ಮುಲ್ಲಾ

ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತನು ತೆಲಂಗಾಣ
ರಾಜ್ಯದ ವಾರಂಗಣ ಮತ್ತು ಹೈದ್ರಾಬಾದದ ಇಬ್ಬರೂ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಮಿರಜ್‌ದ
ಸುತ್ತಮುತ್ತಲಿನ ಪ್ರದೇಶದಲ್ಲಿ ಶೇಖರಿಸಿಟ್ಟು, ಮಹಾರಾಷ್ಟ್ರದ ಸಾಂಗಲಿ, ಮೀರಜ್ ಮತ್ತು ಕರ್ನಾಟಕ
ರಾಜ್ಯದ ಚಿಕ್ಕೋಡಿ, ಬೆಳಗಾವಿ, ಧಾರವಾಡ ಕಡೆಗಳಲ್ಲಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಕಲೆ
ಹಾಕಲಾಯಿತು. ಆರೋಪಿತನಾದ ಆಶ್ಪಾಕ್ ಮೈನುದ್ದಿನ್ ಮುಲ್ಲಾ ವಯಸ್ಸು ೪೩ ವರ್ಷ ಸಾ: ಮಿರಜ ಇತನಿಂದ ಮಿರಜ ತಾಲೂಕಿನ ಮೈಶಾಳ ಗ್ರಾಮದ ಹೊರ ವಲಯದಲ್ಲಿ ನಿಲ್ಲಿಸಿದ್ದ ಆರೋಪಿತನ ಸ್ವೀಫ್ಟ್ ಡಿಜಾಯರ್ ಕಾರ್ ನಂ ಎಮ್‌ಎಚ್ 01 ಎಎಲ್ 2174 ನೇದ್ದರ ಡಿಕ್ಕಿಯಲ್ಲಿಂದ 40 ಕೆಜಿ ಗಾಂಜಾ ಪ್ಯಾಕೆಟಗಳನ್ನು ಮತ್ತು ಮೈಶಾಳ ಜತ್ತ ನೀರು ಸರಬರಾಜು ಮಾಡುವ ಪಂಪ ಹೌಸ್ ಹತ್ತಿರ ಸಂಗ್ರಹಿಸಿ ಇಟ್ಟಿದ್ದ, 78 ಕೆಜಿ ತೂಕದ ಗಾಂಜಾ ಪ್ಯಾಕೆಟಗಳನ್ನು ಮತ್ತು ಅದನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರಿಂದ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿ


01) 2 ಕೆ.ಜಿ ತೂಕದ 60 ಗಾಂಜಾ ಪ್ಯಾಕೆಟಗಳು ಒಟ್ಟು 120 ಕೆಜಿ 24,00,000/- ರೂಪಾಯಿ ಮೌಲ್ಯದ ಗಾಂಜಾ ಅಂಬುವ ಮಾದಕ ವಸ್ತು.

02) ಸ್ವಿಫ್ಟ್ ಡಿಜಾಯರ್ ಕಾರ ನಂ ಎಮ್‌ಎಚ್ 01 ಎಎಲ್ 2174

03) ಕೆಂಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟಿ ನಂ ಎಮ್‌ಎಚ್ 10 ಡಿಕೆ 9165

ಕೃತ್ಯಕ್ಕೆ ಬಳಸಿದ ಕಾರು

ಹಿಗೇ ಒಟ್ಟು 28,50,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಂಗ ಬಂದನದಲ್ಲಿ ಇರಿಸಿದ್ದು, ಸದರಿ ಪ್ರಕರಣದಲ್ಲಿ ಆರೋಪಿತನಿಗೆ ಗಾಂಜಾ ಸರಬರಾಜು ಮಾಡುವ ತೆಲಂಗಾನ ರಾಜ್ಯದ ಇಬ್ಬರು ವ್ಯಕ್ತಿಗಳು ಪರಾರಿ ಇರುತ್ತಾರೆ. ಅವರನ್ನು ಪತ್ತೆ ಮಾಡಿ ಬಂಧಿಸುವದು ಬಾಕಿ ಇರುತ್ತದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನಿಂಗನಗೌಡ ಎ ಪಾಟೀಲ ಪೊಲೀಸ್ ಇನ್ಸ್ಪೆಕ್ಟರ್ ಡಿಸಿಐಬಿ ಘಟಕ ಬೆಳಗಾವಿ ಮತ್ತು ಸಿಬ್ಬಂದಿ ಜನರಾದ ಎಎಸ್‌ಐ ಶ್ರೀಡಿ.ಕೆ ಪಾಟೀಲ, ವ್ಹಿ.ವ್ಹಿಗಾಯಕವಾಡ, ಟಿ.ಕೆ.ಕೊಳಚಿ, ಅರ್ಜುನ ಮಸರಗುಪ್ಪಿ, ಎಲ್.ಟಿ.ಪವಾರ, ಜಯರಾಮ ಹಮ್ಮನ್ನವರ, ಎಸ್.ಎಮ್.ಮಂಗಣ್ಣವರ, ಎಮ್.ಐ.ಪಠಾಣ ಇವರಿಗೆ ಬೆಳಗಾವಿ ಜಿಲ್ಲಾ ಪೊಲೀಸ ವರೀಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.

error: Content is protected !!