ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ: ಘೊಡಗೇರಿ ಗ್ರಾಮಸ್ಥರಿಂದ ರಮೇಶ್ ಕತ್ತಿ ತರಾಟೆಗೆ

ಮಾಜಿ ಸಂಸದ ರಮೇಶ ಕತ್ತಿಗೆ ಹಾಗೂ ಹುಕ್ಕೇರಿ ತಹಶೀಲ್ದಾರರಿಗೆ ಘೊಡಗೇರಿ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ. ಘೋಡಗೇರಿ ನೆರೆ ಸಂತ್ರಸ್ತರು ಕತ್ತಿ ಸಹೋದರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೆರೆ ಸಂತ್ರಸ್ಥರನ್ನು ಬೇಟಿಯಾದ ಸಂದರ್ಭದಲ್ಲಿ ಇಷ್ಟು ದಿನ ಎಲ್ಲಿದ್ರಿ, ಶಾಸಕರು ಎಲ್ಲಿ ಎಂದು ಏಕವಚನದಲ್ಲೇ ನೆರೆ ಸಂತ್ರಸ್ತರು ತರಾಟೆ ತೆಗೆದುಕೊಂಡಿದ್ದಾರೆ. ಪ್ರವಾಹ ಬಂದರೂ ಇಲ್ಲಿಯವರೆಗೆ ಶಾಸಕ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಘೋಡಗೇರಿಗೆ ಬಂದಿರಲಿಲ್ಲ. ಇನ್ನು ಇದೆ ವೇಳೆ ನಿಮಗೆ ಊಟ, ಬಿಸ್ಕಿಟ್ ಎಲ್ಲವನ್ನ ನಾನೇ ಜವಾಬ್ದಾರಿ ವಹಿಸಿಕೊಂಡು ಕೊಡ್ತಿನಿ ಎಂದಿದ್ದಕ್ಕೆ ಹುಕ್ಕೇರಿ ತಹಶಿಲ್ದಾರ ಮಾತಿನಿಂದ ಗ್ರಾಮಸ್ಥರು ಕೆರಳಿ ಕೆಂಡಾಮಂಡಲರಾದ್ರು. ಮೂರು ದಿನದಿಂದ ನೀವು ಎಲ್ಲಿದ್ರಿ, ನಿಮ್ಮ ಊಟ, ಬಿಸ್ಕೆಟ್ ನಮಗೆ ಬೇಕಾಗಿಲ್ಲ ಎಂದ ಜನರು, ನೀವು ನಮ್ಮೂರ ಉಸಾಬರಿಗೆ ಬರಬೇಡಿ. ನಿಮ್ಮಿಂದಲೆ ಇಷ್ಟೆಲ್ಲಾ ಆಗಿದ್ದು. ನೀನು ಹೋಗು ಎಂದು ಕೂಗುತ್ತಿದ್ದಾಗ, ಮಾತನಾಡಲು ಅವಕಾಶ ಸಿಗದೇ ಜನರ ಆಕ್ರೋಶಕ್ಕೆ ರಮೇಶ ಕತ್ತಿ ಅಲ್ಲಿಂದ ನಡೆದರು.

error: Content is protected !!