ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಗೆ ಬಂದ ಟಗರು: ಯಡಿಯೂರಪ್ಪ- ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ. ಸರ್ಕಾರ ಹಾಗೂ ಸಿಎಂ ಕುಟುಂಬದ ವಿರುದ್ದ ಗಂಭೀರ ಆರೋಪ

ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಉತ್ತರ ಪ್ರದೇಶ ಜಂಗಲ್ ರಾಜ್ಯ ಅಂತ ಪ್ರೂವ್ ಆಗಿದೆ. ಅಲ್ಲಿ ಕಾನೂನು ಇಲ್ಲ, ಪೊಲೀಸರು ಸರ್ವಾಧಿಕಾರಿ ರೀತಿ ವರ್ತನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಏನ್ ತಪ್ಪು ಮಾಡಿದ್ರು..? ಏನು ಇಲ್ಲಾ. ಸಂತ್ರಸ್ತ ಯುವತಿಯ ಕುಟುಂಬಕ್ಕೆ ಸ್ವಾಂತನ ಹೇಳಲು ಹೋರಟಿದ್ದರು. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಅಲ್ಲಿನ ಪೊಲೀಸರು ಕೆಟ್ಟದಾಗಿ ವರ್ತನೆ ಮಾಡಿದ್ದಾರೆ. ಕೂಡಲೇ ಯೋಗಿ ಆದಿತ್ಯನಾಥ್ ರಾಜೀನಾಮೆ ಕೊಡಬೇಕು. ಆತ ಯೋಗಿನೋ, ಭೋಗಿನೋ, ರೋಗಿನೋ ಗೊತ್ತಿಲ್ಲ. ಆದ್ರೆ ಆತ ಅಧಿಕಾರದಲ್ಲಿ ಇರಲು ನಾಲಾಯಕ್ ಎಂದು ಟಗರು ಸಿದ್ದರಾಮಯ್ಯ ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ. ಇನ್ನು ಬೆಳಗಾವಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷ ಭೀಕರ ಪ್ರವಾಹ ಬಂದಿತ್ತು‌. ಆದರೆ ಸಂತ್ರಸ್ತರಿಗೆ ಇವತ್ತಿನ ವರೆಗೆ ಮನೆ ಕಟ್ಟಲು ಆಗಿಲ್ಲ. ಯಾರೊಬ್ಬರಿಗೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷ ಬಂದಿದ್ದ ಪ್ರವಾಹಕ್ಕೂ ಸರ್ಕಾರ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ಹಿಗಾದ್ರೆ ಇದು ನಾಗರೀಕ ಸರ್ಕಾರ ಅಂತ ಕರಿಯಬೇಕೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆ್ಯಂಬುಲೆನ್ಸ್ ಖರೀದಿಯಲ್ಲಿ ಅವ್ಯವಾಹರ ಆಗಿದೆ. 2 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಮೆಡಿಕಲ್ ಉಪಕರಣ ಹೆಚ್ಚಿನ ಹಣಕ್ಕೆ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ. ಯಡಿಯೂರಪ್ಪ, ಅಳಿಯ, ಮೊಮ್ಮಗ ಲೂಟಿ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೊಂಡಿದ್ರು. ಈಗ ಅವರ ಮೊಮ್ಮಗ ಆರ್.ಟಿ.ಜಿ.ಎಸ್ ಮೂಲಕ ಹಣ ಲಂಚ ಪಡೆದಿದ್ದಾರೆ ಎಂದು ಟಗರು ಸಿದ್ದರಾಮಯ್ಯ, ರಾಜಾಹುಲಿ ಕುಟುಂಬದ ವಿರುದ್ದ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾಸ್ಕ್ ಹಾಕದ ಕೈ ಕಾರ್ಯಕರ್ತರಿಗೆ ಮಾಸ್ಕ್ ಹಾಕುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇನ್ನು ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಸಿದ್ದರಾಮಯ್ಯ ವಿರುದ್ದ ಮಾತನಾಡುತ್ತ, ಬ್ರಿಟಿಷ್ ರೀತಿ ಸಿದ್ದರಾಮಯ್ಯ ಆಡಳಿತ ನಡೆಸಿದ್ದರು ಎಂಬ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಟಿಲ್ ಎಕಶ್ಚಿತ್ ರಾಜಕಾರಣಿ. ನನ್ನ ಆಡಳಿತದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ಮಾಡಲು ಹಣ ಇದೆಯಾ.
ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಕಟಿಲ್ ಗೆ ಇದೆಲ್ಲ ಗೊತ್ತಿಲ್ಲ ಎಂದದ್ದಾರೆ. ಇನ್ನು ಬೆಳಗಾವಿಯ ಆರ್.ಟಿ.ಓ ವೃತ್ತದಲ್ಲಿ ನಿರ್ಮಿಸಲಾದ ನೂತನ ಕಾಂಗ್ರೆಸ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಈ ಹೇಳಿಕೆ ನೀಡಿದ್ದಾರೆ.

error: Content is protected !!