ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರು: ಮಂಗಳವಾರ ಸಚಿವ ಸಂಪುಟ ರಚನೆ| ಸಿಎಂ ಬಿಎಸ್ ವೈ

ನೆರೆ ಹಾನಿ ಪ್ರದೇಶಗಳ ಕುರಿತು ಸುದೀರ್ಘವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಚರ್ಚೆ ಆಗಿದೆ. ಇನ್ನೂ ಎರಡು- ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕ್ಯಾಬಿನೆಟ್ ರಚನೆ ಮಂಗಳವಾರ 3-4 ಗಂಟೆ ಹೊತ್ತಿಗೆ ಅಂತಿಮ ಆಗತ್ತೆ. ಅಮಿತ್ ಷಾ ಜೊತೆ ಈ ಬಗ್ಗೆ ಮಾತನಾಡಿದ್ದೆನೆ. ಸೋಮವಾರ ಮಧ್ಯಾಹ್ನ ಕ್ಯಾಬಿನೆಟ್ ರಚನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಫೈನಲ್ ಆಗತ್ತೆ ಎಂದ ಸಿಎಂ ಬಿಎಸ್ ವೈ ಮೊದಲ ಹಂತದಲ್ಲಿ 13-14 ಜನ ಶಾಸಕರು ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದರು. ಇನ್ನು ಫೋನ್ ಟ್ಯಾಪಿಂಗ್ ವಿಚಾರವಾಗಿ ನಾಳೆ ಅಧಿಕಾರಿಗಳೊಂದಿಗೆ ಮಾತನಾಡಿ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ. ನೆರೆ ಪೀಡಿತ ಒಂದೊಂದು ಕುಟುಂಬಕ್ಕೆ 10 ಸಾವಿರ ರೂ ಕೊಡೋದು ವಿಳಂಬ ಆಗಿದೆ. ಆ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸ್ತೇನೆ ಎಂದರು. ನೆರೆ ಸಂತ್ರಸ್ತರಿಗೆ ತತ್ ಕ್ಷಣ ಸ್ಪಂದಿಸೋದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಜನ ಧೃತಿಗೆಡುವುದು ಬೇಡ. ಸರ್ಕಾರ ನಿಮ್ಮ ಜೊತೆ ಇದೆ ಎಂದ ಬಿಎಸ್ ವೈ, ಯಡಿಯೂರಪ್ಪಗೆ ಮೋದಿ ಬಳಿ ಹಣ ಕೆಳಲು ತಾಕತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡುತ್ತ, ಅಧ್ಯಯನ ತಂಡ ವರದಿ ಕೊಡದೆ ಪರಿಹಾರ ಕೊಡೋದು ಸಾಧ್ಯವಿದೆಯಾ ..? ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಪರಿಹಾರ ಹಣ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯನವರಿಗೆ ಅರ್ಥ ಆಗುತ್ತೆ ಎಂದರು.

error: Content is protected !!