ಕೂಗು ನಿಮ್ಮದು ಧ್ವನಿ ನಮ್ಮದು

ಪೊಲೀಸ್ ಠಾಣೆ ಮೆಟ್ಟಿಲೇರಿದ ಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯ ಕಲಹ: ಕಲ್ಯಾಣ್ ಪತ್ನಿ ಅಪಹರಣವಾಗಿತ್ತಾ..?

ಬೆಳಗಾವಿ: ಪತ್ನಿಯನ್ನು ಅಪಹರಿಸಿ, ಆಸ್ತಿಯನ್ನೂ ಬರೆಸಿಕೊಳ್ಳಲಾಗಿದೆ ಎಂದು ಖ್ಯಾತ ಚಿತ್ರ ಸಾಹಿತಿ ಕೆ.ಕಲ್ಯಾಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಕೆ.ಕಲ್ಯಾಣ ಪತ್ನಿಯನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ತಮ್ಮ ಅನೇಕ ವಿಭಿನ್ನ ಗೀತೆಗಳ ಮೂಲಕವೇ ಕೆ.ಕಲ್ಯಾಣ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ಇದೀಗ ಕೆ.ಕಲ್ಯಾಣ ಕೌಟಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಕೆ.ಕಲ್ಯಾಣ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಮಂತ್ರವಾದಿ ಶಿವಾನಂದ ವಾಲಿ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಅಪಹರಣ ಮಾಡಿದ್ದಾರೆ. ಅಷ್ಟೇ ಅಲ್ಲ ಮಂತ್ರ, ತಂತ್ರದ ಮೂಲಕ ಆಸ್ತಿಯನ್ನು ಸಹ ಬರೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಲಂ 365, 420, 363 ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಬೆಳಗಾವಿಯ ಮಹಾಂತೇಶ ನಗರದ ಶಿವತೀರ್ಥ ಅಪಾರ್ಟ್ಮೆಂಟ್ ನಲ್ಲಿ ತಂದೆ ತಾಯಿಯ ಜತೆಗೆ ಕೆ.ಕಲ್ಯಾಣ ಪತ್ನಿ ಅಶ್ವಿನಿ ವಾಸವಾಗಿದ್ದಾರೆ. ಇಂದು ಠಾಣೆಗೆ ಅಶ್ವಿಯನ್ನು ಕರೆಸಿದ ಪೊಲೀಸರು ಈ ಬಗ್ಗೆ 4 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ ಕಳಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಶಿವಾನಂದ ವಾಲಿಯನ್ನು ಮಾಳ ಮಾರುತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ಆರಂಭಿಸಿದ್ದಾರೆ. ಪೊಲೀಸ್ ವಿಚಾರಣೆಯ ನಂತರ ಮಾತನಾಡಿದ ಅಶ್ವಿನಿ, ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿ ಇದೆ. ಈಗಲೇ ಏನು ಹೇಳಲ್ಲ ಎಂದಿದ್ದಾರೆ. ನಾಳೆ ಕೌಂನ್ಸಲಿಂಗ ಮುಗಿದ ಬಳಿಕ ಎಲ್ಲಾ ವಿಚಾರವನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಸಾಹಿತಿ ಕೆ.ಕಲ್ಯಾಣ ಸಹ ಈ ಬಗ್ಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಪತ್ನಿ ನನ್ನ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಆದರೇ ಇದರ ಸತ್ಯಾಸತ್ಯತೆ ಕೋರ್ಟ್ ನಲ್ಲಿ ವಿಚಾರಣೆ ಬಳಿಕ ತಿಳಿಯಲಿದೆ. ಅಲ್ಲಿಯ ವರೆಗೆ ಇಂತಹ ಸುದ್ದಿಯನ್ನು ಪ್ರಕಟ ಮಾಡಬಾರದು. ಯಾರೇ ತಪ್ಪು ಮಾಡಿದ್ರು ಅವರಿಗೆ ಶಿಕ್ಷೆಯಾಗಲಿ ಎಂದು ಕೆ ಕಲ್ಯಾಣ ಹೇಳಿದ್ದಾರೆ. ಜೀವನದಲ್ಲಿ ಪರಿಶ್ರಮ ಮತ್ತು ನಿಷ್ಠೆಯಿಂದ ಮುಂದೆ ಬಂದಿದ್ದೇನೆ. ಯಾರಾದ್ರು ವೈಯಕ್ತಿಕ ತೆಜೋವಧೆ ಮಾಡಿದ್ರೆ ಸುಮ್ಮನೆ ಇರಲ್ಲ. ಕಾನೂನು ಮೂಲಕ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆಯನ್ನು ಸಾಹಿತಿ ಕೆ.ಕಲ್ಯಾಣ ನೀಡಿದ್ದಾರೆ. ಸಾಹಿತಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಪತ್ನಿಯ ಕೌಂನ್ಸಲಿಂಗ್ ಬಳಿಕ ಯಾವ ವಿಚಾರ ಗೊತ್ತಾಗಲಿದೆ ಎಂಬುದು ಕಾದು ನೋಡಬೇಕು.

error: Content is protected !!