ಕೂಗು ನಿಮ್ಮದು ಧ್ವನಿ ನಮ್ಮದು

ಪತ್ನಿ ಹಣೆಗೆ ಮುತ್ತಿಟ್ಟು ಮನವೊಲಿಸ್ತಿನಿ. ಸಾಹಿತಿ ಕೆ.ಕಲ್ಯಾಣ ದಾಂಪತ್ಯ ಕಲಹ: ಕಲ್ಯಾಣ ಸುದ್ದಿಗೋಷ್ಠಿಯ ಕಂಪ್ಲೀಟ್ ಮಾಹಿತಿ

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಕಲಹ ಹಿನ್ನೆಲೆ ಬೆಳಗಾವಿಯಲ್ಲಿ ಕೆ.ಕಲ್ಯಾಣ ಪ್ರೇಸ್ಮೀಟ್ ಮಾಡಿದ್ದಾರೆ. ನಿನ್ನೆ ನನ್ನ ಪತ್ನಿ ನನ್ನ ಬಗ್ಗೆ ಹಠಾತ ಆರೋಪ ಮಾಡಿದ್ದಾರೆ. ಪತ್ನಿಯ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಕಲ್ಯಾಣ, ನಾನು ನನ್ನ ಹೆಂಡ್ತಿ ಚೆನ್ನಾಗಿ ಇದ್ದೇವೆ. ಪತ್ನಿಯ ಈ ರೀತಿ ಹೇಳಿಕೆ ಹಿಂದಿನ ಸಂಗತಿ ನನಗೆ ಗೊತ್ತಾಗಬೇಕು. ನಾವು ಮದುವೆ ಆಗಿ 15 ವರ್ಷ ಆಗಿದೆ. ನಮ್ಮ ದಾಂಪತ್ಯದಲ್ಲಿ ಸರಸ ವಿರಸ ಎಲ್ಲವೂ ಇತ್ತು. ನಾನು ನನ್ನ ಪತ್ನಿ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಇದ್ದೇವು. ನನ್ನ ಮನೆಗೆ ಅತ್ತೆ ಮಾವ ಬಂದ್ರು. ಆಗ ನಮ್ಮ ಮನೆಗೆ ಗಂಗಾ ಕುಲಕರ್ಣಿ ಕೂಡ ಬಂದರು. ನಮ್ಮ ಮನೆಗೆ ಅಡುಗೆ ಕೆಲಸಕ್ಕ ಗಂಗಾ ಕುಲಕರ್ಣಿ ಬಂದ್ರು. ಅವಾಗಿನಿಂದ ನಮ್ಮ ಮನೆಯ ವಾತಾವರಣ ಸಂಪೂರ್ಣ ಬದಲಾಯ್ತು ಎಂದು ಕೆ.ಕಲ್ಯಾಣ ಬೇಸರ ವ್ಯಕ್ತಪಡಿಸಿದ್ದಾರೆ. ಒಂದಿನ ನಮ್ಮ ಮನೆಯಲ್ಲಿ ಗಂಗಾ ಕುಲಕರ್ಣಿ ಸೂಚನೆಯಂತೆ ಮಧ್ಯರಾತ್ರಿ ಲಿಂಬೆ ಹಣ್ಣು ಇಟ್ಟು ಪೂಜೆ ಮಾಡಿದ್ರು‌. ಒಂದಿನ ಬಾಗಲಕೋಟೆ ಬಳಿಯ ಬೀಳಗಿ ಹತ್ತಿರ ಇರುವ ಸ್ವಾಮೀಜಿ ಶಿವಾನಂದ ವಾಲಿ ಮಾಟ ಮಂತ್ರ ಹೇಳಿದ್ರು. ಅದನ್ನ ನಾನು ನಂಬಲಿಲ್ಲ. ಜನವರಿಯಲ್ಲಿ ನನ್ನ ಪತ್ನಿ ಬೆಳಗಾವಿಗೆ ಬಂದ್ರು ಅವರ ಜೊತೆಗೆ ನನ್ನ ಪತ್ನಿ ಅತ್ತೆ ಮಾವ ಬಂದ್ರು. ಆ ಬಳಿಕ ನಾನು‌ ಅವರನ್ನ‌ ಭೇಟಿ ಮಾಡಲು ಬಂದೆ. ನನಗೆ ಅವರನ್ನು ಭೇಟಿ ಮಾಡಲು ಅತ್ತೆ ಅವಕಾಶ ನೀಡಲಿಲ್ಲ.

ನಮ್ಮ ಅತ್ತೆ ಬೆಳಗಾವಿ ಮನೆಯಲ್ಲೂ ಮಧ್ಯರಾತ್ರಿ ಪೂಜೆಗಳನ್ನ ಮಾಡುತ್ತಿದ್ದರು. ಅಲ್ಲದೇ ನನ್ನ ಪತ್ನಿ ನನ್ನ ನಂಬರ ಅನ್ನ ಬ್ಲಾಕ್ ಮಾಡಿದ್ಲು. ಬೆಳಗಾವಿಯಲ್ಲಿ ಅತ್ತೆ, ಮಾವ, ಪತ್ನಿ ಹಾಗೂ ಗಂಗಾ ಕುಲಕರ್ಣಿ ಅವರನ್ನ ಭೇಟಿ ಮಾಡಿದೆ. ಆದ್ರೆ ಪತ್ನಿ ಕೊರಳಲ್ಲಿ ಮಾಂಗಲ್ಯ ಇರಲಿಲ್ಲ, ಕಾಲಲ್ಲಿ ಕಾಲುಂಗರ ಇರಲಿಲ್ಲ. ನನ್ನ ಪತ್ನಿ ತಾಯಿ ಅವಳ ಹಣೆಗೆ ಕುಂಕುಮ ಹಚ್ಚಿ ಕರೆದುಕೊಂಡು ಬಂದ್ರು. ಇವರೆಲ್ಲಾ ಮಹಾಂತೇಶ ನಗರದ ಗಜಾನನ ಗುಂಡಕಲ್ ಮನೆಯಲ್ಲಿ ಇದ್ದರು. ನನ್ನ ಪತ್ನಿ ಸಂಬಂಧಿಕರಿಂದ ಹಣವನ್ನ ಸಂಗ್ರಹಿಸಿದ್ದಾರೆ. ಆಗ ನನ್ನ ಪತ್ನಿ ಖಾತೆಯಿಂದ 1 ಲಕ್ಷ 70 ಸಾವಿರ ರೂಪಾಯಿ ಶಿವಾನಂದ ವಾಲಿ ಖಾತೆಗೆ ವರ್ಗಾವಣೆ ಆಗಿದೆ. ಅಲ್ಲದೇ ಬೆಳಗಾವಿಯಲ್ಲಿ ಇರುವ ಅತ್ತೆ ಮಾವನ ಆಸ್ತಿ ಶಿವಾನಂದ ವಾಲಿ ಹೆಸರಿಗೆ ವರ್ಗಾವಣೆ ಆಗಿದೆ ಎಂದಿರುವ ಕಲ್ಯಾಣ, ಕಳೆದ ಮೂರುವರೆ ತಿಂಗಳಿಂದ ಪತ್ನಿ, ಅತ್ತೆ, ಮಾವ ತಲೆ ಮರೆಸಿಕೊಂಡು ತಿರುಗುತ್ತಿದ್ದರು. ಹೀಗಾಗಿ ಈ ವಿಚಾರವಾಗಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಕೇಸ್ ದಾಖಲು ಮಾಡಿದೆ. ಅತ್ತೆ, ಮಾವ, ಪತ್ನಿ ಸುರಕ್ಷತೆ ದೃಷ್ಟಿಯಿಂದ ಕೇಸ್ ನೀಡಿದೆ. ಯಾವುದೇ ರಕ್ತ ಸಂಬಂಧಿ ಅಲ್ಲದ ವ್ಯಕ್ತಿಗೆ ಹಣ, ಆಸ್ತಿ ನೀಡಿರುವುದು ನನಗೆ ಅನುಮಾನಕ್ಕೆ ಕಾರಣವಾಗಿದೆ. ಪತ್ನಿ, ಅತ್ತೆ, ಮಾವ ಶಿವಾನಂದ ವಾಲಿ ಮೂವರು ನಂಬರ ಒಂದೇ ದಿನ ‌ಸ್ವೀಚ್ ಆಫ್ ಆಗಿತ್ತು. ಆ ಕಾರಣಕ್ಕೆ ಕಿಡ್ನಾಪ ಕೇಸ್ ದಾಖಲಾಗಿದೆ. ಶಿವಾನಂದ ವಾಲಿ ಅರೇಸ್ಟ್ ಆದ ಬಳಿಕ ನನ್ನ ಪತ್ನಿ ನನ್ನ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ. ಶಿವಾನಂದ ಅರೇಸ್ಟ್ ಆದ ಮೇಲೆ ಯಾಕೇ ನನ್ನ ಪತ್ನಿ ಆರೋಪ ಮಾಡಿದ್ದಾಳೆ. ಮುಂಚೆ ಯಾಕೇ ಮಾತನಾಡಲಿಲ್ಲ ಎಂದು ಕಲ್ಯಾಣ ಪ್ರಶ್ನೆ ಮಾಡಿದ್ದಾರೆ. ತಮ್ಮ ಪತ್ನಿ ಮಾಡಿದ ಆರೋಪವನ್ನ ತಳ್ಳಿ ಹಾಕಿದ ಕಲ್ಯಾಣ, ನಾನು ನನ್ನ ಪತ್ನಿಗೆ ಯಾವುದೇ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿಲ್ಲ.

ನನಗೆ 15 ವರ್ಷದ ಅವಧಿಯಲ್ಲಿ ಇಲ್ಲದ ಅಪೇಕ್ಷೆ ಈಗ ಎಲ್ಲಿಂದ ಬರುತ್ತೆ. ಅವರ ಆಸ್ತಿ ಬಗ್ಗೆ ನಾನು ಯಾವುದೇ ಅಪೇಕ್ಷೆ ಮಾಡಿಲ್ಲ. ನಾನು ಯಾವುದೇ ಮಾಟ ಮಂತ್ರ ನಂಬುವುದಿಲ್ಲ. ಹೀಗಾಗಿ ಮಾಟ ಮಂತ್ರ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ. ಅಲ್ಲದೆ ಶಿವಾನಂದ ವಾಲಿಗೆ 20 ಲಕ್ಷ ಹಣ, ಹೆಂಡ್ತಿ ಒಡವೆಗಳು ಎಲ್ಲಿ ಹೋದವು ಗೊತ್ತಿಲ್ಲ. ವಿಚ್ಛೇದನ ವಿಚಾರ ನನಗೆ ನಿನ್ನೆ ಮಾತ್ರ ಗೊತ್ತಾಗಿದೆ. ನನ್ನ ಪತ್ನಿ, ಅತ್ತೆ, ಮಾವ ಅವರ ಬ್ರೇನ್ ವಾಶ್ ಮಾಡಲಾಗಿದೆ. ನನ್ನ ಪತ್ನಿಯನ್ನ ನಾನು ಅವರೊಂದಿಗೆ ಮಾತನಾಡಿ ಪ್ರೀತಿಯಿಂದ ಮನವೊಲಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಲ್ಯಾಣ, ಅದು ಹಣೆಗೆ ಮುತ್ತು ಕೊಟ್ಟು ಅಥವಾ ಕವಿತೆ ಬರೆದು ಅಥವಾ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಅವಳನ್ನ ಮನವೊಲಿಸುವೆ. ನನ್ನ ಪತ್ನಿಯನ್ನ ನಾನು ಮನವೊಲಿಸುವೆ. ನನ್ನ ಪ್ರೀತಿಯನ್ನ ಉಳಿಸಿಕೊಳ್ಳಲು ಕೆಲಸ ಮಾಡುವೆ ಎಂದಿದ್ದಾರೆ. ಒಂದು ವೇಳೆ ಕಾನೂನು ಮುಂದೆ ಬಂದ್ರು, ಅಲ್ಲಿ ಕೂಡಾ ಇಬ್ಬರ ಮಧ್ಯೆ ಕೌನ್ಸಿಲಿಂಗ್ ಮಾಡ್ತಾರೆ. ನಾನು ನನ್ನ ಪತ್ನಿ ಇಬ್ಬರು ಒಟ್ಟಾಗಿ ಕುಳಿತು ಪ್ರೇಸ್ಮೀಟ್ ಮಾಡ್ತಿನಿ ಎಂದಿರುವ ಕಲ್ಯಾಣ, ಕುಂದಾನಗರಿಯಲ್ಲಿ ಕುಳಿತು ಕವಿತೆ ಬರೆದು, ಅವಳಿಂದಲೇ ಹಾಡು ಹಾಡಸ್ತಿನಿ ಎಂದಿದ್ದಾರೆ. ಇನ್ನು ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿಗೆ ಕಲ್ಯಾಣ ಕೈಮುಗಿದು ಮನವಿ ಮಾಡ್ತಿನಿ ಮನೆ ಹಾಳು ಮಾಡುವ ಕೆಲಸವನ್ನ ಮಾಡಬೇಡಿ ಎಂದಿದ್ದಾರೆ. ನನ್ನ ಪತ್ನಿ ಪ್ರತಿಯೊಬ್ಬರು ಸಂಬಂಧಿಕರು ನಾವಿಬ್ಬರು ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ. ಪರಿಸ್ಥಿತಿಗಳು ನಮ್ಮ ಇಬ್ಬರ ಮಧ್ಯೆ ಇಂತಹ ಸ್ಥಿತಿ ತಂದಿವೆ. ನನ್ನ ಪತ್ನಿ ಜೊತೆಗೆ ಏಕಾಂತದಲ್ಲಿ ಭೇಟಿಯಾಗಿ ಮಾತಾಡ್ತಿನಿ. ನನ್ನ ಸಂಬಂಧಿಕರು, ನನ್ನ ಪತ್ನಿ ಸಂಬಂಧಿಕರು ಬಂದಿದ್ದಾರೆ. ಎಲ್ಲರೂ ಸೇರಿ ಸಮಾಲೋಚನೆ ಮಾಡ್ತಾರೆ. ನನ್ನ ಮೇಲೆ ಏಕಾಏಕಿ ಗುರುತರ ಆರೋಪ ಮಾಡುತ್ತಿದ್ದಾರೆ. ನನ್ನ ತೇಜೋವದೆ ಮಾಡಿದ್ರೆ ಮುಲಾಜೀಲ್ಲದೇ ಮಾನನಷ್ಟ ಮೊಕದ್ದಮೆ ಹಾಕ್ತಿನಿ ಎಂದು ಕೆ.ಕಲ್ಯಾಣ ಎಚ್ಚರಿಸಿದ್ದಾರೆ.

error: Content is protected !!