ಕೂಗು ನಿಮ್ಮದು ಧ್ವನಿ ನಮ್ಮದು

ನೀನು ಭ್ರಷ್ಟ ಅಂತ ಯಡಿಯೂರಪ್ಪ ಮುಂದೆನೇ ಹೇಳಿದಿನಿ. ಬಿಜೆಪಿಯವ್ರು ತಿನ್ನಪ್ಪ-ನುಂಗಪ್ಪ ಕೆಲಸ ಮಾಡ್ತಿದಾರೆ: ಸಿದ್ದರಾಮಯ್ಯ

ಬೆಳಗಾವಿ: ಬೆಳಗಾವಿಯಲ್ಲಿ ನೂತನ ಕಾಂಗ್ರೆಸ್ ಭವನ ಉದ್ಘಾಟನೆ ಸಮಾರಂಭದ ಭಾಷಣದುದ್ದಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜಾಹುಲಿ ಯಡಿಯೂರಪ್ಪ ವಿರುದ್ದ ಕೆಂಡಕಾರಿದ್ದಾರೆ. ಕಾಂಗ್ರೆಸ್ ಭವನ ಬೆಳಗಾವಿ ಜಿಲ್ಲೆಗೆ ದೊಡ್ಡ ಕೊಡುಗೆಯಾಗಿದೆ. ಇಷ್ಟು ದೊಡ್ಡ ಕಾಂಗ್ರೆಸ್ ಭವನ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲಾ. ಬೆಳಗಾವಿ ಜಿಲ್ಲೆಗೆ ಇಷ್ಟು ದೊಡ್ಡ ಕಾಂಗ್ರೆಸ್ ಭವನ ಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ. ಏನೆ‌ ಆಗಲಿ ಈಗಾ ಭವನ ಕಟ್ಟಿ ಆಗಿದೆ. ಈಗಾ ನಮ್ಮ ಸರ್ಕಾರ ಇಲ್ಲಾ, ಈಗ ರಾಜಾಹುಲಿಯಾ ಬಂದಿದ್ದಾರೆ ಎಂದು ಯಡಿಯೂರಪ್ಪ ವಿರುದ್ದ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ. ಜನರು ನನಗೆ ಹುಲಿಯಾ ಅಂತಾ ಕರೆದಿದ್ದಾರೆ. ಆದರೆ ಯಡಿಯೂರಪ್ಪಗೆ ರಾಜಾಹುಲಿ ಅಂತಾ ಅವರ ಪಕ್ಷದವರೇ ಕರೆದಿದ್ದಾರೆ ಅಂತಾ ರಾಜಾಹುಲಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಕಾಂಗ್ರೆಸ್ ಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ಬೆಳಗಾವಿಯಲ್ಲಿ ನಡೆದಿದೆ.

ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಇರೋದ್ರಿಂದ ಬೆಳಗಾವಿಯನ್ನ ವಿಭಜನೆ ಮಾಡಿಲ್ಲ. ಎಂಇಎಸ್ ಕಾಟ ಇರೋದ್ರಿಂದ ವಿಭಜನೆ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ 15 ಸ್ಥಾನ ಗೆಲ್ಲಬೇಕು ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಸಮಾವೇಶದಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ್ರು. ಇದೇ ವೇಳೆ ನನಗೂ ಕರೋನ ಬಂದಿತ್ತು ಮತ್ತೆ ಯಾರಿಗೂ ಕರೋನ ಬರಬಾರದು. ಮಾಸ್ಕ್ ಸರಿಯಾಗಿ ಹಾಕೊಳ್ಳಿ ಅಂತಾ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು. ಕರೋನ ಜೊತೆಗೆ ಬದಕಬೇಕು ಎಂದು ಕರೋನ ಬಗ್ಗೆ ಸಿದ್ದರಾಮಯ್ಯ ಜಾಗೃತಿ ಮೂಡಿಸಿದರು. ಇನ್ನು ಭಾಷಣದಲ್ಲಿ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅಧಿಕಾರದ ಆಸೆಗಾಗಿ ಒಬ್ಬೊಬ್ಬ ಎಂಎಲ್ಎ ಗೆ 20 -30 ಕೋಟಿ ಕೊಟ್ಟು ಮತ್ತೆ ಅಧಿಕಾರಕ್ಕೆ ಬಂದು ಕುಳಿತ್ತಿದ್ದಾರೆ. ಇವರು ಜನರ ಉದ್ದಾರಕ್ಕಾಗಿ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಲೂಟಿ ಮಾಡೊದಕ್ಕೆ ಅಧಿಕಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಮುಂದೇನೆ ಹೇಳಿದ್ದೇನೆ ನೀನು ಭ್ರಷ್ಟ ಇದ್ದಿಯಾ ಅಂತಾ. ಬಿಜೆಪಿಯಂತ ಭ್ರಷ್ಟ ಪಕ್ಷ ಮತ್ತೊಂದಿಲ್ಲ. ಅವರಿಗೆ ಅಧಿಕಾರಲ್ಲಿ ಉಳಿಯುವುದಕ್ಕೆ ಯೋಗ್ಯತೆ ಇದೇಯಾ? ಸರ್ಕಾರದಲ್ಲಿ ಇವರಿಗೆ ಸಂಬಳ ಕೊಡಲು ದುಡ್ಡಿಲ್ಲ. ಸರ್ಕಾರ ಕಮಿಟೆಡ್ ಎಕ್ಸಪೆಂಡೆಚರ್ 90% ಪೆನಶನ್, ಸಂಬಳ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣ ಉಪಯೋಗ ಆಗುತ್ತೆ. ಉಳಿದ %10 ರಲ್ಲಿ ಸುಮಾರು %6 ರಷ್ಟು ಬಿಜೆಪಿ ಸರ್ಕಾರದಲ್ಲಿ ಲಂಚ ತೆಗೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ನಮ್ಮ ಯೋಜನೆಗಳನ್ನೇ ಮುಂದುವರಿಸಿದ್ದಾರೆ. ಇವರ ಯಾವುದೇ ಹೊಸ ಯೋಜನೆಗಳಿಲ್ಲ. ಬಿಜೆಪಿಯವರು ಬರಿ ತಿನ್ನಪ್ಪ, ನುಂಗಪ್ಪ ಕೆಲಸ ಮಾಡ್ತಾರೆ. ಎಂಎಲ್ಎ, ಸಚಿವರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಇಲ್ಲ. ರಾಜಾಹುಲಿ ಬರಲಿ ಅಂತಾ ಹೇಳ್ತಾರೆ. ನಿಮ್ಮ ಕಡೆ ಯಾವುದೇ ಅಧಿಕಾರ ಇಲ್ಲ ಎಂದು ಬಿಜೆಪಿ ಶಾಸಕ, ಸಚಿವರ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ರು. ಇದೇ ಸಂದರ್ಭದಲ್ಲಿ ನೀವೆಲ್ಲ ಎಲೆಕ್ಷನ್ ವಾರಿಯರ್ಸ್‌ ಆಗಬೇಕು ಎಂದು ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ರು.

error: Content is protected !!