ಕೂಗು ನಿಮ್ಮದು ಧ್ವನಿ ನಮ್ಮದು

ದಸರಾ ಮೇಲೆ ಕೊರೋನಾ ಕರಿನೆರಳು, ಅರಮನೆ ಅಂಗಳಕ್ಕಷ್ಟೇ ಸೀಮಿತವಾದ ವಿಶ್ವ ವಿಖ್ಯಾತ ದಸರಾ: ಅ.17 ರಂದು ಉದ್ಘಾಟನೆ: ಅಭಿಮನ್ಯುವಿಗೆ ಅಂಬಾರಿ ಹೊರುವ ಭಾಗ್ಯ

ಅಭಿಮನ್ಯು ಆನೆಗೆ ದಸರಾ ಅಂಬಾರಿ ಹೊರುವ ಭಾಗ್ಯ

ಅ. 2 ರಂದು ಅರಮನೆ ಅಂಗಳದಲ್ಲೇ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ಕೊರೋನಾ ವಾರಿಯರ್ಸ್ ರಿಂದ ಈ ಬಾರಿಯ ದಸರಾ ಉದ್ಘಾಟನೆ

ಅರಮನೆ ಆವರಣದಲ್ಲೇ ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಮಿಕ್ಕೆಲ್ಲಾ ಕಾರ್ಯಗಳು ರದ್ದು.

ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಧಾರ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೇಲೆ ಕೊರೋನಾ ಕರಿ ನೆರಳು ಆವರಿಸಿದ್ದು, ಇದೇ ಮೊದಲ ಬಾರಿಗೆ ಅತೀ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆಯಾಗುತ್ತಿದೆ. ವೈಭವದ ಜಂಬೂಸವಾರಿಯನ್ನು ಅರಮನೆ ಆವರಣಕ್ಕೆ ಸಮೀತಗೊಳಿಸಲಾಗಿದ್ದು, ಕೂಂಬಿಂಗ್ ಕಿಂಗ್ ಅಭಿಮನ್ಯುಗೆ ಅಂಬಾರಿ ಹೊರುವ ಭಾಗ್ಯ ಲಭಿಸಿದೆ. ಇನ್ನೂ ಅರಮನೆ ಸಾಂಸ್ಕೃತಿಕ ಕಾರ್ಯಕ್ರಮ ಹೊರತುಪಡಿಸಿ ಮಿಕ್ಕೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ನಿನ್ನೆ ಶನಿವಾರ ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

  • ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಮೇಲೆ ಕೊರೋನಾ ಕರಿನೆರಳು
  • ಅರಮನೆ ಅಂಗಳಕ್ಕಷ್ಟೇ ಸಮೀತ ಈ ಬಾರಿಯ ದಸರಾ ಸಗಡರ
  • ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಮಿಕ್ಕೆಲ್ಲಾ ಕಾರ್ಯಕ್ರಮಗಳು ರದ್ದು

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊರೋನಾದಿಂದಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿದಲು ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದು ಹಲವು ನಿರ್ಧಾರ ಕೈಗೊಂಡ ನಂತರ ಮೈಸೂರಿನಲ್ಲಿ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮೊದಲ ಕಾರ್ಯಕಾರಿಣಿ ಸಭೆ ನಡೆಸಲಾಯಿತು. ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹಾಗೂ ಶಾಸಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳು

  • ಅರಮನೆ ಅಂಗಳಕ್ಕಷ್ಟೇ ಈ ಬಾರಿಯ ದಸರಾ ಸಡಗರ
  • ಅರಮನೆ ಆವರಣದಲ್ಲಿಯೇ ಜಂಬೂಸವಾರಿ ಮೆರವಣಿಗೆ
  • ಅ.17 ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ
  • ಕೊರೋನಾ ವಾರಿಯರ್ಸ್ ರಿಂದ ಈ ಬಾರಿಯ ದಸರಾ ಉದ್ಘಾಟನೆ.
  • ಅರಮನೆ ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಮಿಕ್ಕೆಲ್ಲಾ ಕಾರ್ಯಕ್ರಮಗಳು ರದ್ದು
  • ಮೈಸೂರು ನಗರಕ್ಕೆ ವಿದ್ಯುತ್ ದೀಪಾಲಂಕಾರ ಎಂದಿನಂತೆ ಅಳವಡಿಕೆ
  • ಅ.2 ಕ್ಕೆ ಅರಮನೆ ಆವರಣದಲ್ಲಿಯೇ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
  • ಅಭಿಮನ್ಯು ಆನೆಗೆ ಅಂಬಾರಿ ಹೊರುವ ಜವಾಬ್ದಾರಿಗೆ ಅಸ್ತು

ಇನ್ನು ಜನಸಾಮಾನ್ಯರಿಗೆ ದಸರಾವನ್ನು ಈ ಬಾರಿ ಅರಮನೆ ಅಂಗಳಕ್ಕೆ ಸೀಮಿತಗೊಳಲಾಗಿದ್ದು, ಅ. 17 ರಂದು ಬೆಳಿಗ್ಗೆ 7 ಗಂಟೆ 45 ನಿಮಿಷದಿಂದ 8 ಗಂಟೆ 15 ನಿಮಿಷ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗಲಿದೆ. ಕೊರೋನಾ ವಾರಿಯರ್ಸ್ ರಿಂದಲೇ ಈ ಬಾರಿಯ ದಸರಾ ಉದ್ಘಾಟನೆ ಆಗಲಿದ್ದು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರ ಹೆಸರನ್ನು ಆಯಾಯ ಇಲಾಖೆ ಮುಖ್ಯಸ್ಥರು ನೀಡಲಿದ್ದು, ಈ ಪೈಕಿ ಒಬ್ಬರು ಉದ್ಘಾಟನೆ ಮಾಡಲಿದ್ದಾರೆ. ಉಳಿದವರಿಗೆ ಸನ್ಮಾನ ಮಾಡಲಾಗುತ್ತದೆ. ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿಗಳು ಅಂತಿಮಗೊಳಿಸಲಿದ್ದಾರೆ. ಚಾಮುಂಡಿಬೆಟ್ಟದ ಉದ್ಘಾಟನಾ ಕಾರ್ಯಕ್ರಮ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಉಳಿದಂತೆ ಕಾಡಂಚಿನ ವೀರನಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಗಜಪಡೆಗೆ ಸ್ವಾಗತ ಕಾರ್ಯಕ್ರಮ ಕೂಡಾ ರದ್ದಾಗಿದ್ದು ಅಕ್ಟೋಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಅರಮನೆ ಅಂಗಳದಲ್ಲಿಯೇ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ನಡೆಯಲಿದೆ. ಇನ್ನೂ ಈ ಬಾರಿಯಿಂದ ಕೂಂಬಿಂಗ್ ಕಿಂಗ್ ಎಂದೇ ಹೆಸರು ಪಡೆದಿರುವ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರುವ ಭಾಗ್ಯ ಲಭಿಸಿದೆ. ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಗೋಪಿ, ವಿಕ್ರಮ್, ವಿಜಯ ಹಾಗೂ ಕಾವೇರಿ ಆನೆಗಳು ಮಾತ್ರ ಪಾಲ್ಗೊಳ್ಳುತ್ತಿವೆ. ಅರಮನೆಯಿಂದ ಬನ್ನಿ ಮಂಟಪವರೆಗೆ ನಡೆಯುತ್ತಿದ್ದ ಜಂಬೂಸವಾರಿಯನ್ನು ರದ್ದು ಮಾಡಿ ಅರಮನೆ ಆವರಣದಲ್ಲಿಯೇ ಜಂಬೂಸವಾರಿ ನಡೆಯಲಿದೆ.

ಕೆಲವೇ ಕೆಲವು ಕಲಾ ತಂಡಗಳು ಭಾಗವಹಿಸಲಿದ್ದು, ಕೇಂದ್ರ ಅನುಮತಿ ನೀಡಿದರೆ ಕೇವಲ 2 ಸಾವಿರ ಮಂದಿಗೆ ಮಾತ್ರ ಪಾಸ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ ಈ ಬಾರಿಯ ದಸರಾ ಸಾಂಕೇತಿಕವಾಗಿ ಮಾತ್ರ ನಡೆಯಲಿದ್ದು, ನವರಾತ್ರಿ ವೇಳೆಯಲ್ಲಿ ಮೈಸೂರಿನ ಬೀದಿ ಬೀದಿಗಳಲ್ಲಿ ಕಂಗೊಳಿಸುವ ವಿದ್ಯುತ್ ದೀಪಾಲಂಕಾರದ ಸಂಭ್ರಮಕ್ಕಷ್ಟೇ ಜನ ಸೀಮಿತಗೊಳ್ಳಬೇಕಾಗಿದೆ. ಜೀವ ಮೊದಲು ಜೀವನ ನಂತರ ಎಂದುಕೊಂಡ ಮನೆ ಮನೆಗಳಲ್ಲಿ ನವರಾತ್ರಿ ಆಚರಿಸಿ ಜನ ಸಂಭ್ರಮಿಸಬೇಕಾಗಿದೆ.

error: Content is protected !!