ಮಂಗಳೂರು: ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರಿಂದ ಮತ್ತೆ ಮೂವರು ಡ್ರಗ್ ಪೆಡ್ಲರ್ ಗಳ ಬಂಧನವಾಗಿದೆ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಶಾ ನವಾಜ್ ಸೆರೆಯಾಗಿದೆ. ಮಂಗಳೂರಿನ ಬಂದರು ಮೂಲದ ನಿವಾಸಿ ಶಾ ನವಾಜ್ ಜೊತೆಗೆ ಬೆಂಗಳೂರಿನಿಂದ ಮತ್ತಿಬ್ಬರು ಪೆಡ್ಲರ್ ಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಗೇರಿ ನಿವಾಸಿ ಶಾಮ್ ಹಾಗು ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಮಂಗಳೂರು ಪೊಲೀಸರು ಡ್ರಗ್ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಈ ಬಂಧಿತರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಮುಂಬೈ, ಗೋವಾದಿಂದ ಡ್ರಗ್ಸ್ ಸ್ಮಗಲ್ ಮಾಡಿ ಮಂಗಳೂರಿನಲ್ಲಿ ಪೂರೈಕೆ ಮಾಡುತ್ತಿದ್ದ ಖದಿಮರು, ಎಂಡಿಎಂಎ, ಎಲ್ಎಸ್.ಡಿ, ಸೇರಿದಂತೆ ಇನ್ನಿತರ ಸಿಂಥೆಟಿಕ್ ಡ್ರಗ್ಸ್ ಸ್ಮಗಲ್ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೋಲಿಸರಿಂದ ತನಿಖೆ ಮುಂದುವರಿದಿದ್ದು ಮತ್ತೆಷ್ಟು ಪೆಡ್ಲರ್ ಗಳಿಗೆ ಕೋಳ ಬಿಳುತ್ತೆ ಕಾದುನೋಡಬೇಕಿದೆ.