ಬೆಳಗಾವಿ: ಡಿ.ಕೆ.ಶಿವಕುಮಾರ್ ಸಣ್ಣ ರಾಜಕಾರಣ, ಜನರ ದಿಕ್ಕು ತಪ್ಪಸೋದನ್ನ ಬಿಡಲಿ ಎಂದು ಡಿಕೆಶಿಗೆ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಸುರೇಶ ಅಂಗಡಿ ಅಂತ್ಯಕ್ರಿಯೆಯಲ್ಲಿ ರಾಜಕೀಯ ಮಾಡಲಾಗಿದೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದ್ದು, ಪ್ರಧಾನ ಮಂತ್ರಿಗಳ ಸೂಚನೆ ಪ್ರಕಾರ ಕೋವಿಡ್ ನಿಯಮಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆ ಮಾಡಲಾಗಿದೆ. ಆದ್ರೆ ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಣ್ಣ ರಾಜಕಾರಣ ಮಾಡಬಾರದು. ಅಭಿವೃದ್ಧಿ ವಿಚಾರದಲ್ಲಿ ಹಾಗೂ ಜನರ ಸಂಕಟದ ಸಮಯದಲ್ಲಿ ಕೂಡಿ ರಾಜ್ಯದ ಅಭಿವೃದ್ಧಿ ಮಾಡಬೇಕು. ರಾಜಕೀಯ ಮಾಡೋದಾದ್ರೆ ರಾಜಕೀಯ ಮಾಡಲಿ. ಡಿ.ಕೆ.ಶಿವಕುಮಾರ್ ತಾವಾಗಿಯೇ ಜನರ ದಿಕ್ಕು ತಪ್ಪಸೋ ಕೆಲಸವನ್ನೆ ಮಾಡಿದ್ದಾರೆ. ರಾಜಕೀಯ ಮಾಡ್ತಾರೆ.
ಡಿ.ಕೆ.ಶಿವಕುಮಾರ್ ಮೊನ್ನೆ ವಿಧಾನಸಭೆಯಲ್ಲಿ ಏನು ಮಾತಾಡಿದ್ರು ಎಲ್ಲರಿಗೂ ಗೊತ್ತಿದೆ. ಅವರು ಹತಾಶರಾಗಿ ಸುಳ್ಳು ಮಾತಾಡುತ್ತಿದ್ದಾರೆ ಎಂಸ ಸಚಿವರು, ಅಂಗಡಿ ಕುಟುಂಬಕ್ಕೆ ಬಿಜೆಪಿಯವ್ರು ಏನ್ ನ್ಯಾಯ ಕೊಡ್ತಾರೋ ನೋಡೊಣ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡುತ್ತ, ನಮ್ಮ ಪಕ್ಷದ ತತ್ವ ಸಿದ್ದಾಂತಗಳಡಿ ಎಲ್ಲವು ನಡೆಯಲಿದೆ. ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಬಗ್ಗೆ ನೋಡಿಕೊಂಡ್ರೆ ಒಳ್ಳೆಯದು. ಸುರೇಶ ಅಂಗಡಿ ಕುಟುಂಬಕ್ಕೆ ಲೋಕಸಭಾ ಟಿಕೆಟ್ ನೀಡುವಂತೆ ಅಭಿಮಾನಿಗಳ ಒತ್ತಾಯ ವಿಚಾರ, ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳ ಅಡಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು, ಹೈಕಮಾಂಡ್ ತೀರ್ಮಾನ ಅಂತಿಮ ಎಂದಿದ್ದಾರೆ. ಯಡಿಯೂರಪ್ಪ ಚೆಕ್ ತಗೋತಿದ್ರು ಅವರ ಮೊಮ್ಮಗ RTGS ಮೂಲಕ ಹಣ ಪಡೆಯುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಸುಮ್ಮನೆ ಮಾಧ್ಯಮಗಳಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಅವರ ಹತ್ರ ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ. ಆರೋಪ ಸಾಬೀತುಪಡಿಸಿದ್ರೆ ಈಗಾಗಲೇ ಸಿಎಂ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.