ಕೂಗು ನಿಮ್ಮದು ಧ್ವನಿ ನಮ್ಮದು

ಜಮೀರ್ ಅಹ್ಮದ್ ಚಿಲ್ಲರೇ, ಗುಜರಿ ಗಿರಾಕಿ. ಜಮೀರ್ ಎನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದ : ಶಾಸಕ ರೇಣುಕಾಚಾರ್ಯ

ದಾವಣಗೆರೆ: ಜಮೀರ್ ಅಹ್ಮದ್ ಚಿಲ್ಲರೇ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಎನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದಲೆ ಎಂದು ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ‌ ಎಂ.ಪಿ.ರೇಣುಕಾಚಾರ್ಯ ಜಮೀರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯಾ, ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ಮುಂದೆ ಖಾಕಿ ಬಟ್ಟೆ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಜಮೀರ್ ವಾಚ್ ಮನ್ ಆಗಲಿಲ್ಲ. ಜಮೀರ್ ಅಹ್ಮದ್ ಒಂದು ರೀತಿ ಎರಡು ನಾಲಿಗೆ ವ್ಯಕ್ತಿ ಎಂದು ವ್ಯಂಗ್ಯವಾಡಿದ ರೇಣುಕಾಚಾರ್ಯ, ಅನೈತಿಕ ಚಟುವಟಿಕೆಯಿಂದಲೇ ಜಮೀರ್ ಅಹ್ಮದ್ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು‌ ಕುಡಿಯಲೇಬೇಕು.

ಜಮೀರ್ ಅಹ್ಮದ್ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡಲಿ ಎಂದ ರೇಣುಕಾಚಾರ್ಯ, ಎಷ್ಟೇ ಪ್ರಭಾವಿಗಳಿರಲಿ, ರಾಜಕಾರಣಿಗಳಿರಲಿ, ಗಣ್ಯವ್ಯಕ್ತಿಗಳೇ ಇರಲಿ, ಸಿನಿಮಾ ನಟ ನಟಿಯರು ಎಷ್ಟೇ ಹೆಸರು ಮಾಡಿದ್ರು ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಇದೇ ವೇಳೆ ಹೇಳಿದ್ರು.

error: Content is protected !!