ಕೂಗು ನಿಮ್ಮದು ಧ್ವನಿ ನಮ್ಮದು

ಚಿಕ್ಕೋಡಿಯಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು: ನೀರು ಹೊರಹಾಕಲು ಪರಿತಪಿಸಿದ ಜನರು

ಚಿಕ್ಕೋಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅಪಾರ ಪ್ರಮಾಣದ ಬೆಳೆಹಾನಿ ಆಗಿದ್ದರೆ ಇನ್ನೊಂದು ಕಡೆ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಾಂತಿ ನಗರದಲ್ಲಿ ಮಳೆಯ ನೀರು ಮನೆಗೆ ನುಗ್ಗಿದ ಘಟನೆ ನಡೆದಿದೆ. ಅಥಣಿ ಪಟ್ಟಣದ ಶಂಕರ ನಗರದ ಸುಮಾರು ಐದು ಮನೆಗಳಿಗೆ ಮಳೆಯ ನೀರು ನುಗ್ಗಿದ ಪರಿಣಾಮ ಐದು ಮನೆಯ ನಿವಾಸಿಗಳಿಗೆ ದಿಕ್ಕು ತೋಚದಂತಾಗಿದೆ. ಅಥಣಿ ಪುರಸಭೆಯಿಂದ ಚರಂಡಿ ನಿರ್ಮಾಣ ವೇಳೆ ನಡೆದ ಅಚಾತುರ್ಯದ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಂತಿನಗರದ ಮಂಜುಶ್ರೀ ಹೋಟೆಲ್ ಹಿಂಭಾಗದಲ್ಲಿ ಇರುವ ಮನೆಗಳಲ್ಲಿ‌ ನೆಲದಿಂದಲೂ ನೀರು ಏಳುತ್ತಿದ್ದು ಅಶೋಕ ಸಿಜೋಳೀ, ರಾಜಶ್ರೀ ಮಗದುಮ್, ಜಯಶ್ರೀ ಪಾಟೀಲ, ಪ್ರಭು ಅಳ್ಳಿಮಟ್ಟಿ, ವಾರಿಮನಿ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಎಲ್ಲ ಕುಟುಂಬಸ್ಥರು ನಿರನ್ನು ಹೊರಹಾಕಲು ಪರದಾಡುವಂತಾಗಿದ್ದು ಪುಟ್ಟ ಮಕ್ಕಳು ವಯೋವೃದ್ದರು ನಿದ್ದೆ ಇಲ್ಲದೆ ಪರಿತಪಿಸುವಂತಾಗಿದೆ. ಅಥಣಿ ಪುರಸಭೆಯ ವಾರ್ಡ ನಂಬರ 19 ರಲ್ಲಿ ಯಾವುದೇ ಚರಂಡಿ ನಿರ್ಮಾಣ ಮಾಡಿಲ್ಲ. ಅಷ್ಟೇ ಅಲ್ಲದೆ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯ ನೀರು ಕೂಡ ಇಳಿಜಾರಿನಲ್ಲಿ ಇರುವ ಮನೆಗಳಿಗೆ ನುಗ್ಗುತ್ತಿರುವದು ಜನರು ಕಂಗಾಲಾಗಿದ್ದಾರೆ. ಎಡೆ ಬಿಡದೆ ಸುರಿಯುತ್ತಿರುವ ಮಳೆರಾಯನ ಜೊತೆಗೆ ಪುರಸಭೆ ಅಧಿಕಾರಿಗಳಿಗೂ ಅಥಣಿ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

error: Content is protected !!