ಕೂಗು ನಿಮ್ಮದು ಧ್ವನಿ ನಮ್ಮದು

ಚಾಮರಾಜನಗರ: ಜಿಂಕೆ ಬೇಟೆಯಾಡಿ ಹೊತ್ತೊಯ್ದ ಹುಲಿರಾಯ: ಪ್ರವಾಸಿಗರ ಕ್ಯಾಮೆರಾದಲ್ಲಿ ಅದ್ಭುತ ದೃಶ್ಯ ಸೆರೆ

ಬೆಳ್ಳಂ ಬೆಳಗ್ಗೆ ಹುಲಿರಾಯನ ಭರ್ಜರಿ ಬೇಟೆ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಿಂಕೆಯೊಂದನ್ನು ಹುಲಿ ಬೇಟೆಯಾಡಿ ಎಳೆದೊಯ್ಯುವ ಅದ್ಭುತ ದೃಶ್ಯ ಪ್ರವಾಸಿಗರ ಕ್ಯಾಮರದಲ್ಲಿ ಸೆರೆಯಾಗಿದ್ದು, ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ದೃಶ್ಯ ಕಂಡು ಬಂದಿದೆ. ಇನ್ನು ಬೆಳ್ಳಂ ಬೆಳಗ್ಗೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಕಂಡ ಈ ಅದ್ಭುತ ದೃಶ್ಯದಿಂದ ಪ್ರವಾಸಿಗರು ನಿಬ್ಬೆರಗಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಪಕ್ಕದ ಅರಣ್ಯದಲ್ಲಿ ಇರುವ ಮಧು ಮಲೈ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅದರಂತೆ ಬಂಡಿಪುರ ಅಭಯಾರಣ್ಯ ಪ್ರದೇಶ ಕೂಡ ಹಚ್ಚ ಹಸಿರಿನಿಂದ ಸಿಂಗಾರಗೊಂಡಿದ್ದು, ವೀಕ್ ಎಂಡಲ್ಲಿ ವನ್ಯಜೀವಿಗಳ ಕಲರವ ಕಣ್ತುಂಬಿಕೊಳ್ಳಲು ಇಲ್ಲಿ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

error: Content is protected !!