ಕೂಗು ನಿಮ್ಮದು ಧ್ವನಿ ನಮ್ಮದು

ಖುದ್ದು ನೈಟ್ ಫೀಲ್ಡಿಗಿಳಿದ ಉಡುಪಿ ಎಸ್ಪಿ: ಚೆಕ್ ಪೋಸ್ಟ್ ಗಳಲ್ಲಿ ಹೈಅಲರ್ಟ್: ಗಾಂಜಾ ಘಾಟು ತಡೆಗೆ ನೈಟ್ ಡ್ಯೂಟಿ

ಉಡುಪಿ: ಗಾಂಜಾ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಉಡುಪಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು ಜಿಲ್ಲಾ ಗಡಿಯಲ್ಲಿ ಹೆಚ್ಚು ಹೆಚ್ಚು ತಪಾಸಣೆ ಮಾಡುತ್ತಿದ್ದಾರೆ. ವಾಹನಗಳ ತಪಾಸಣೆ ಮಾಡುವ ಜೊತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕೂಡ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಎಸ್ ಪಿ ವಿಷ್ಣುವರ್ಧನ್, ಎಎಸ್ಪಿ ಕುಮಾರ ಚಂದ್ರ ಖುದ್ದಾಗಿ ಫೀಲ್ಡಿಗೆ ಇಳಿದರು. ದಡಬಡ ಶಬ್ದಮಾಡುತ್ತಾ ಕರ್ಕಶವಾಗಿ ಓಡಾಡುವ ಬುಲೆಟ್ ಗಳಿಗೆ ಫೈನ್ ಹಾಕಿದ್ದಾರೆ.

ಕಣ್ಣು ಕೋರೈಸುವ ನೀಲಿ ಲೈಟುಗಳು, ಹೆಡ್ಲೈಟ್ ನ ಪಕ್ಕದಲ್ಲಿ ಇರುವ, ಸವಾರರಿಗೆ ಇರಿಟೇಷನ್ ಮಾಡುವ ನೀಲಿಬಣ್ಣದ ಎಲ್ಇಡಿ ಲೈಟ್ ಗಳನ್ನು ಅಳವಡಿಸಿರುವ ಸವಾರರ ಮೇಲೆ ದಂಡ ಹಾಕುತ್ತಿದ್ದಾರೆ. ಎರಡು ಗಂಟೆಯಲ್ಲಿ ಸುಮಾರು 70 ಕೇಸುಗಳನ್ನು ದಾಖಲಿಸಿ 40000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಟ್ರಾಫಿಕ್ ಪೋಲಿಸರು ಮೋಟಾರು ಕಾಯ್ದೆಗಳನ್ನು ಉಲ್ಲಂಘಿಸಿದ ಸುಮಾರು 25 ಕೇಸುಗಳು ದಾಖಲಾಗಿದ್ದು 15000 ರಷ್ಟು ದಂಡವನ್ನು ಉಡುಪಿ ನಗರ ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನೆರಡು ದಿನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ರೌವ್ಯ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಎಸ್ ಪಿ ವಿಷ್ಣುವರ್ಧನ್ ಎಚ್ಚರಿಕೆ ನೀಡಿದರು.

error: Content is protected !!