ಕೂಗು ನಿಮ್ಮದು ಧ್ವನಿ ನಮ್ಮದು

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಸಂಭ್ರಮ: ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವಕ್ಕೆ ಸಿದ್ದತೆ

ಮಂಗಳೂರು: ಮಂಗಳೂರು ದಸರಾ ಎಂದೇ ಪ್ರಸಿದ್ಧಿ ಗಳಿಸಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವ ನಾಳೆಯಿಂದ ಶುರುವಾಗಲಿದೆ. ಕೊರೊನಾ ನಿರ್ಬಂಧಗಳ ಕಾರಣ ಎಂದಿನ ವೈಭವ ಇಲ್ಲದಿದ್ದರೂ, ಸಂಪ್ರದಾಯಕ್ಕೆ ಚ್ಯುತಿ ಬರದಂತೆ ದಸರಾ ಉತ್ಸವ ನಡೆಯಲಿದೆ. ಅಕ್ಟೋಬರ್ 17 ರಿಂದ 24 ರ ವರೆಗೆ ಉತ್ಸವ ನಡೆಯಲಿದ್ದು ಆರು ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೆ, ಮಾಸ್ಕ್ ಕಡ್ಡಾಯ ಮಾಡಲಾಗಿದ್ದು ದೇಗುಲ ಪ್ರವೇಶ ಜಾಗದಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಸಲಾಗಿದೆ. ಸ್ಕ್ಯಾನರ್ ಪರೀಕ್ಷೆಯಲ್ಲಿ ಜ್ವರದ ಲಕ್ಷಣ ಕಂಡುಬಂದರೆ ಪ್ರವೇಶ ನಿರಾಕರಿಸಲಾಗುತ್ತದೆ.

ಇನ್ನು ದೇವಸ್ಥಾನ ಒಳಗೆ ಹೋಗಿ ಫೋಟೊ ತೆಗೆಯುವಂತಿಲ್ಲ. ಇದಕ್ಕಾಗಿ ಮೊಬೈಲ್ ನಿಷೇಧ ಮಾಡಲಾಗಿದ್ದು ಅಲ್ಲಲ್ಲಿ ನಿಂತು ಮೊಬೈಲಿನಲ್ಲಿ ಫೋಟೊ ತೆಗೆಯದಂತೆ ಈ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಒಂದು ಭಾಗದಲ್ಲಿ ಪ್ರವೇಶ ಮತ್ತೊಂದು ಭಾಗದಲ್ಲಿ ನಿರ್ಗಮನ ದ್ವಾರ ಅಳವಡಿಸಲಾಗಿದ್ದು ನಿರ್ಗಮನ ಬಾಗಿಲಲ್ಲಿ ಊಟದ ಪಾರ್ಸೆಲ್ ಕಿಟ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ದಿನವೂ ಅನ್ನಸಂತರ್ಪಣೆ ಇತ್ತು. ಹೀಗಾಗಿ ಅನ್ನಪ್ರಸಾದ ಸಂಪ್ರದಾಯ ಮೊಟಕುಗೊಳಿಸುವುದು ಬೇಡವೆಂದು ಆಹಾರ ಕಿಟ್ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಳೆಯೇ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳ ಪ್ರತಿಷ್ಠಾಪನೆ ಆಗಲಿದ್ದು ಕೋವಿಡ್ ವಾರಿಯರ್, ಎನ್ಆರ್ ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ದಸರಾಕ್ಕೆ ಚಾಲನೆ ನೀಡಲಿದ್ದಾರೆ.

error: Content is protected !!