ಕೂಗು ನಿಮ್ಮದು ಧ್ವನಿ ನಮ್ಮದು

ಕಾಡು ಹಂದಿಗೆ ವಿಷಪ್ರಾಶನ, ಬೇಟೆಯಾಡಿ ಸಾಗಿಸುತ್ತಿದ್ದಾಗ ಆರೋಪಿಗಳು ಪರಾರಿ

ಚಾಮರಾಜನಗರ: ಕಾಡುಹಂದಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿ ಸಾಗಾಣಿಕೆ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚಿ ಬಂಧಿಸಲು ತೆರಳಿದ ವೇಳೆ ಮೂರು ಜನ ಬೇಟೆಗಾರರ ತಂಡ ಪರಾರಿಯಾಗಿರುವ ಘಟನೆ ದಂಟಳ್ಳಿ ಗ್ರಾಮದಲ್ಲಿ ಜರುಗಿದೆ . ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾಡಂಚಿನ ದಂಟಳ್ಳಿ ಗ್ರಾಮದ ಗೋವಿಂದ (42), ಹರೀಶ (23), ಸಂತೋಷ್ (22) ಎಂಬವರು ಆರೋಪಿಗಳಾಗಿದ್ದಾರೆ. ಈ ಮೂರು ಜನ ದಂಟಳ್ಳಿ ಗ್ರಾಮದ ಕೈಬಾವಿ ಹಳ್ಳದ ಸಮೀಪದ ಓಣಿ ರಸ್ತೆಯಲ್ಲಿ ಕಾಡುಹಂದಿಗೆ ವಿಷಪ್ರಾಶನ ಮಾಡಿಸಿ ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬುದಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.

ಈ ಸಂಬಂಧ ಕಾವೇರಿ ವನ್ಯಧಾಮ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ಮತ್ತು ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಗಾರರ ತಂಡ ಅರಣ್ಯಾಧಿಕಾರಿಗಳನ್ನು ಕಂಡ ಕೂಡಲೇ ಬೇಟೆಯಾಡಿದ್ದ ಕಾಡುಹಂದಿ ಮತ್ತು ದ್ವಿಚಕ್ರ ವಾಹನವನ್ನು ಬಿಟ್ಟು ಪರಾರಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಪರಾರಿಯಾಗಿರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಅನಂತ ರಾಮು, ಕನಕರಾಜು, ಅರಣ್ಯ ರಕ್ಷಕ ಗಣೇಶ್, ಕೃಷ್ಣಯ್ಯ ಹಾಜರಿದ್ದರು .

error: Content is protected !!