ಕೋಲಾರ: ಕಾಂಗ್ರೆಸ್ ಪಕ್ಷ ಗರಿಕೆ ಹುಲ್ಲು ಹಾಗೂ ಕಂಬಳಿ ದುಂಪೆಗಳು ಇದ್ದಹಾಗೆ. ಅದು ಬೇಸಿಗೆಗೆ ಒಣಗುತ್ತದೆ. ಮಳೆಗೆ ಮತ್ತೆ ಚಿಗುರಿಕೊಳ್ಳುತ್ತದೆ ಎಂದು ಕೋಲಾರದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿದ್ದಾರೆ. ಇಂದು ಕೋಲಾರದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರು, ಪಾರ್ಟಿ ಇದ್ದೇ ಇರುತ್ತೆ ಎಂದರು. ಇನ್ನು ಕಾಂಗ್ರೆಸ್ ಪಾರ್ಟಿಯನ್ನ ಗರಿಕೆ ಹುಲ್ಲಿಗೆ ಹೋಲಿಸಿದ ಅವರು, ಗರಿಕೆ ಹುಲ್ಲಿನಂತೆ ಬೇಸಿಗೆಯಲ್ಲಿ ಒಣಗುತ್ತದೆ, ಮಳೆಗಾಲದಲ್ಲಿ ಚಿಗುರುತ್ತದೆ ಅದೇ ರೀತಿ ಕಾಂಗ್ರೆಸ್ ಪಕ್ಷವೂ ಕೂಡ ಅಧಿಕಾರವಿಲ್ಲದೆ ಇದ್ದರು ಪಾರ್ಟಿ ಎಂದಿಗೂ ಇರುತ್ತದೆ ಎಂದರು. ಇನ್ನು ಎಐಸಿಸಿ ಅಧ್ಯಕ್ಷರ ನೇಮಕದ ಕಾರ್ಯಕ್ರಮ ನಡೆಯುತ್ತಿದ್ದು, ರಾಹುಲ್ ಗಾಂಧೀಯವರೆ ನಮ್ಮ ನಾಯಕರಾಗಬೇಕು ಎಂದರು. ಇನ್ನು ವರ್ಕಿಂಗ್ ಕಮಿಟಿಯಲ್ಲಿನ ಪ್ರತಿಯೊಬ್ಬರು ರಾಹುಲ್ ಗಾಂಧಿಯವರೆ ನಾಯಕರಾಗಬೇಕೆಂದು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆಂದು ಮುನಿಯಪ್ಪ ತಿಳಿಸಿದ್ರು. ಅಲ್ಲದೆ ಅವರು ಸಾಮಾನ್ಯವಾಗಿ ಬಂದವರು ಅಲ್ಲ. ಮೋತಿಲಾಲ್ ನೆಹರು, ಪಂಡಿತ್ ಜವಹರಲಾಲ್ ನೆಹರು ಅವರಿಂದ ಬಂದಂತಹವರು. ಹೀಗಾಗಿ ಅವರ ಕುಟುಂಬ ಸಮಾಜಕ್ಕೆ, ಸರ್ಕಾರಕ್ಕೆ ಅತಿ ಹೆಚ್ಚು ಆಸ್ತಿಗಳನ್ನ ನೀಡಿದ್ದಾರೆ. ಜೊತೆಗೆ ಅನೇಕ ವರ್ಷ ಜೈಲಿನಲ್ಲಿದ್ದು ಬಂದಿದ್ದಾರೆ ಎಂದರು.