ಕೂಗು ನಿಮ್ಮದು ಧ್ವನಿ ನಮ್ಮದು

ಕಳ್ಳತನ ಆರೋಪಿಗೆ ಕೊರೊನಾ ಸೊಂಕು: ಕಾರವಾರ ಆಸ್ಪತ್ರೆಯಿಂದ ಬಂಧಿತ ಆರೋಪಿ ಪರಾರಿ

ಕಾರವಾರ: ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿತನೋರ್ವ ವಾರ್ಡ್‌ನಿಂದ ಪರಾರಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ನಗರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಶಿಕಾರಿಪುರ ಮೂಲದ ಸೈಯದ್ ಕರೀಮ್ ಖಾನ್ ತಪ್ಪಿಸಿಕೊಂಡ ಆರೋಪಿಯಾಗಿದ್ದಾನೆ.

ಆಸ್ಪತ್ರೆಯಿಂದ ಪರಾರಿಯಾದ ಆರೋಪಿ

ಎರಡು ದಿನದ ಹಿಂದೆ ಮುಂಡಗೋಡಿನ ಕಾತೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಗಂಧದ ಮರ ಕಳ್ಳತನಕ್ಕೆ ಯತ್ನಿಸಿದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಬಳಿಕ ಇಬ್ಬರಿಗೂ ಕೊರೊನಾ ಟೆಸ್ಟ್ ನಡೆಸಿದಾಗ ಓರ್ವನಲ್ಲಿ ಸೋಂಕು ಪತ್ತೆಯಾಗಿತ್ತು. ಆತನನ್ನ ಚಿಕಿತ್ಸೆಗೆಂದು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ನಾಪತ್ತೆಯಾಗಿದ್ದಾನೆ. ಸದ್ಯ ಪೊಲೀಸರು ಪರಾರಿಯಾಗಿರುವ ಆರೋಪಿ ಪತ್ತೆಗೆ ಶೋಧ ಕಾರ್ಯ ಪ್ರಾರಂಭಿಸಿದ್ದು ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!