ಕೂಗು ನಿಮ್ಮದು ಧ್ವನಿ ನಮ್ಮದು

ಕಲಬುರಗಿಯಲ್ಲಿ ಒಂದೇ ವಾರದಲ್ಲಿ 14 ಕ್ವಿಂಟಾಲ್ ಗಾಂಜಾ ಸೀಜ್ : ಗಾಂಜಾ ಘಾಟಿಗೆ ಸಿಪಿಐ, ಪಿಎಸ್ಐ ಸೇರಿ ಐವರು ಪೋಲಿಸರ ತಲೆದಂಡ

ಕಲಬುರಗಿ: ಅಲ್ಲಿ ಪ್ರತಿನಿತ್ಯ ಕೋಟಿ ಕೋಟಿ ರೂಪಾಯಿ ಮೌಲ್ಯದ ಗಾಂಜಾ ವ್ಯಾಪಾರ ನಡಿತಾಯಿತ್ತು.. ವ್ಯಾಪಾರ ನಡೀತಾಯಿದೆ ಅಂದ ಮೇಲೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದೆ ಇರುತ್ತೆ.. ಆದರೆ ಇಲ್ಲಿ ಮಾತ್ರ ಖಾಕಿ ಪಡೆ ಮೌನವಹಿಸಿತ್ತು.. ಅದ್ಯಾವಾಗ ಬೆಂಗಳೂರು ಸಿಸಿಬಿ ಪೊಲೀಸರು ಬಂದು ದಾಳಿ ಮಾಡಿದ್ರೊ ಕಲಬುರಗಿ ಪೊಲೀಸರ ಬಂಡವಾಳ ಬಯಲಾಗಿದೆ. ಈ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು.. ಇಡೀ ಸ್ಯಾಂಡಲ್‌ವುಡ್‌ನ್ನೆ ತಲ್ಲಣಗೊಳಿಸಿರುವ ಡ್ರಗ್ಸ್ ಮಾಫಿಯಾದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪೊಲೀಸರು ರಾಜ್ಯದೆಲ್ಲಡೇ ಗಾಂಜಾ ಬೆಳೆಯುವ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡೊಕೆ ಶುರು ಮಾಡಿದ್ದಾರೆ. ಅಂದಹಾಗೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ್ ತಾಂಡಾ ಬಳಿ ಸಿಕ್ಕ ಆರು ಕೋಟಿ ರೂಪಾಯಿ ಮೌಲ್ಯದ 13 ಕ್ವಿಂಟಾಲ್ ಗಾಂಜಾ ಪ್ರಕಣರದ ನಂತರ, ನಿದ್ದೆಯಿಂದ ಎಚ್ಚೇತ್ತುಕೊಂಡಿರುವ ಕಲಬುರಗಿ ಜಿಲ್ಲಾ ಪೊಲೀಸ್, ಇದೀಗ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಕುಂಚಾವರಂ ಸಮೀಪ ಸಂಗಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೆಳೆಯಲಾಗಿದ್ದ 88 ಕೆಜಿ ಗಾಂಜಾ, ಕುಂಚಾವರಂ ಬಳಿ ಕಬ್ಬಿನ ಗದ್ದೆಯಲ್ಲಿ ಬೆಳೆಯಲಾಗಿದ್ದ 25 ಕೆಜಿ ಗಾಂಜಾ ಬೆಳೆಯನ್ನ ದಾಳಿ ಮಾಡಿ ಸಿಜ್ ಮಾಡಲಾಗಿದೆ.

ಒಟ್ಟಾರೆಯಾಗಿ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ 14 ಕ್ವಿಂಟಾಲ್‌ಗೂ ಅಧಿಕ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ್ ತಾಂಡಾ ಬಳಿ ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ದಾಳಿ ಮಾಡಿ ಆರು ಕೋಟಿ ರೂಪಾಯಿ ಮೌಲ್ಯದ 13 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಳಗಿ ಠಾಣೆ ಸಿಪಿಐ ಭೋಜರಾಜ್ ರಾಠೋಡ್, ಪಿಎಸ್‌ಐ ಬಸವರಾಜ್ ಚಿತಕೋಟಿ, ಎಎಸ್‌ಐ ನೀಲಕಂಠ ಹಾಗೂ ಪೇದೆಗಳಾದ ಅನಿಲ್ ಮತ್ತು ಶರಣು ಸೇರಿದಂತೆ ಐವರು ಪೊಲೀಸರನ್ನ ಅಮಾನತು ಮಾಡಿ ಕಲಬುರಗಿ ಎಸ್ಪಿ ಡಾ ಸಿಮಿ ಮರಿಯಂ ಜಾಜ್೯ ಆದೇಶ ಹೊರಡಿಸಿದ್ದಾರೆ.

ಇನ್ನೂ ಕಲಬುರಗಿ ಜಿಲ್ಲೆ ಆಂದ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದ್ದು, ಅತೀ ಹೆಚ್ಚಾಗಿ ಗಾಂಜಾ ಸಪ್ಲೈ ಆಗೋದು ಚಿಂಚೋಳಿ ತಾಲೂಕಿಗೆ ಅತೀ ಹತ್ತಿರವಿರುವ ತೆಲಂಗಾಣ ಗಡಿಯಿಂದ. ಹೌದು.. ತೆಲಂಗಾಣದಿಂದ ಕಲಬುರಗಿ ಜಿಲ್ಲೆ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಕೆಲ ತಾಂಡಾಗಳಲ್ಲಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡಲು ಪ್ರಮುಖ ಕೇಂದ್ರವನ್ನ ಮಾಡಿಕೊಳ್ಳಲಾಗಿದೆ.. ಇಲ್ಲಿಂದನೇ ಇಡೀ ರಾಜ್ಯಕ್ಕೆ ಮಾದಕ ವಸ್ತುಗಳು ಸಪ್ಲೈ ಆಗ್ತಾಯಿತ್ತು ಎಂಬ ಆಘಾತಕಾರಿ ಮಾಹಿತಿ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದ ವೇಳೆ ಬಹಿರಂಗವಾಗಿದೆ.

ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಗಾಂಜಾ ದಂಧೆ ಈ ಮೊದಲಿನಿಂದಲು ನಡಿತಾ ಬಂದಿದ್ದು, ಪೊಲೀಸರು ಇನ್ನಷ್ಟು ಕಾರ್ಯಪೃವತ್ತರಾಗಿ ಗಾಂಜಾಕ್ಕೆ ಕಡಿವಾಣ ಹಾಕಬೇಕು ಎನ್ನುತ್ತಾರೆ ಸ್ಥಳೀಯರು. ಅದೆನೆ‌ ಇರಲಿ, ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಗಳಿಂದ ಇದೀಗ ಗಾಂಜಾದ ಘಾಟು ಪೊಲೀಸರನ್ನ ಬಲಿ ಪಡೆದುಕೊಳ್ಳುತ್ತಿರೋದು ವಿಪರ್ಯಾಸವೇ ಸರಿ. ಇನ್ನಾದರು ಪೊಲೀಸರು ಗಾಂಜಾ ಹಾಗೂ ಡ್ರಗ್ಸ್ ಸರಬರಾಜು ಮಾಡ್ತಿರೋ ಕುಳಗಳ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

error: Content is protected !!