ಕೂಗು ನಿಮ್ಮದು ಧ್ವನಿ ನಮ್ಮದು

ಋಣಿಯಾಗಿದ್ದೇನೆ ನಿಮಗೆ..

-ದೀಪಕ ಶಿಂಧೇ..

ಸಾರ್ಥಕವಾಯಿತು ಬದುಕು. ತುಂಬಿದ ಮೂವತ್ತೈದಕ್ಕೆ… ಮುನ್ನೂರಕ್ಕೂ ಹೆಚ್ಚು ಸಹೃದಯರ ನಿಸ್ವಾರ್ಥ ಶುಭಾಷಯಕ್ಕೆ ಸದಾಕಾಲ ಋಣಿ ನಾನು

ನಿಮ್ಮ ಅಕ್ಕರೆ ಪ್ರೀತಿ ವಿಶ್ವಾಸ ನಂಬಿಕೆಗಳ ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು.
ಹುಟ್ಟು ಉಚಿತ ಸಾವು ಖಚಿತ ಅನ್ನುವ ಸತ್ಯ ತಿಳಿದವ ನಾನು ಬದುಕು ಕಲಿಸಿದ ಗುರುಗಳಿಗೆ ಋಣಿಯು ನಾನು

ಬಯಸಿದ್ದೆಲ್ಲಾ ಸಿಗದೆಯೂ ಇರಬಹುದು
ಸಂತಸ, ನೆಮ್ಮದಿಗಳ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸು ನನ್ನದು. ದುಖಃ ದುಮ್ಮಾನಗಳಿಗೆಲ್ಲ ಹೆಗಲಾದ ಜೀವಗಳಿಗೂ ಋಣಿಯು ನಾನು

ನಮ್ಮನ್ನು ಆಳಿದವರೆಲ್ಲ ಅಳಿದುಹೋಗಿದ್ದಾರೆ ಇಲ್ಲಿ ಶಾಶ್ವತ ಯಾವುದೂ ಅಲ್ಲ.. ಆಡಿಕೊಂಡವರು ಯಾವ ಲೆಕ್ಕ?? ಇದ್ದಷ್ಟು ದಿನ ಇರುವಷ್ಟು ಕ್ಷಣ ನೀವು ಕೊಡುವ ಒಲವಿಗೆ ಋಣಿಯು ನಾನು.

ಹೆತ್ತವರಿಗೆ, ಒಡಹುಟ್ಟಿದವರಿಗೆ ಅದಕ್ಕೂ ಮಿಗಿಲಾಗಿ ಜೀವಕ್ಕೆ ಜೀವವಾದವರಿಗೆ. ನಕ್ಕು ನಗಿಸಿದವರಿಗೆ ಕಂಬನಿಯ ತರಿಸಿದವರಿಗೆ, ಕಣ್ಣೀರು ಒರೆಸಿದವರಿಗೆ ಋಣಿಯು ನಾನು..

ಈ ಜೀವ ನಿಮ್ಮದು ಕೊನೆವರೆಗಿನ ನಿಷ್ಠೆ ನನ್ನದು. ನೀಯತ್ತು ಕಲಿಸಿದವರಿಗೆ ಎಲ್ಲ ಮರೆತು ನಡೆದವರಿಗೆ
ಜೊತೆಯಾಗಿ ಉಳಿದವರಿಗೆ ಋಣಿಯು ನಾನು..

ಮತ್ತದೆ ಆಸೆಯ ಕನಸು ಕಂಗಳ ಹೊತ್ತು
ಕಾಯುವೆನು ಮತ್ತೊಂದು ಹುಟ್ಟುಹಬ್ಬಕ್ಕೆ ನಾನು.
ನಿಮ್ಮ ಶುಭಾಷಯಗಳು ವ್ಯರ್ಥವಾಗದ ಹಾಗೆ
ಬಿದ್ದು ಹೋದ ಈ ಬದುಕ ಕಟ್ಟಲೆಂದು.. ಎಡವಿ ಬಿದ್ದವರ ಕೈ ಹಿಡಿದು ನಡೆಸಲೆಂದು.

error: Content is protected !!