ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಇನ್ಸುಲಿನ್ ಮರೆತು ಬಂದಿದ್ದಾರೆ. ಹೀಗಾಗಿ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ ನಲ್ಲಿ ಮಾಜಿ ಸಿಎಂ ಇನ್ಸುಲಿನ್ ಗಾಗಿ ಕಾದು ಕುಳಿತ ಪ್ರಸಂಗ ಎದುರಾಗಿದೆ. ಸಿದ್ದರಾಮಯ್ಯ ರೆಗ್ಯೂಲರ್ ಆಗಿ ತೆಗೆದುಕೊಳ್ಳುವ ಇನ್ಸುಲಿನ್ ಇಂಜೆಕ್ಷನ್ ತರಿಸಲು ಮಾಜಿ ಶಾಸಕ ಅಶೋಕ ಪಟ್ಟಣ ಪ್ರಯತ್ನ ನಡೆಸಿದ್ದಾರೆ. ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡ ನಂತರ ಬೆಳಗಾವಿಯಿಂದ ಬದಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಲಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಜಿ ಶಾಸಕ ಅಶೋಕ್ ಪಟ್ಟಣದ, ಸಿದ್ದರಾಮಯ್ಯ ಇನ್ಸುಲಿನ್ ತೆಗೆದುಕೊಳ್ಳುವುದನ್ನ ಮರೆತಿದ್ದಾರೆ. ಅವರು ಚೆನ್ನಾಗಿದ್ದಾರೆ. ಏರಪೋರ್ಟಿಂದ ಹೊರಗಡೆ ಬಂದಾಗ ಬೇಕಾದ್ರೆ ಕುಸ್ತಿ ಹಿಡಿರಿ, ಅವರು ಮೈಸೂರು ಪೈಲ್ವಾನ್ ಎಂದು ಅಶೋಕ ಪಟ್ಟಣ್ ತಮಾಷೆ ಮಾಡಿದ್ರು ಅಲ್ಲದೇ ಬೆಳಗಾವಿಯಿಂದ ಸಾಂಬ್ರಾ ಏರ್ಪೋರ್ಟ್ ಗೆ ಅಶೋಕ ಪಟ್ಟಣ್ ಚಾಲಕನ ಕಡೆಯಿಂದ ಇನ್ಸುಲಿನ್ ಇಂಜೆಕ್ಷನ್ ತರಿಸಲಾಗುತ್ತಿದೆ.