ಕೂಗು ನಿಮ್ಮದು ಧ್ವನಿ ನಮ್ಮದು

ಅಶ್ವಿನಿ ಕಲ್ಯಾಣ ಕಿಡ್ನ್ಯಾಪ್ ಕೇಸ್ ನ ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಗೆ: ಸಿಪಿಐ ಗಡ್ಡೇಕರ್ ರಿಂದ ಫುಲ್-ಡ್ರಿಲ್

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಬಿರುಕು ಪ್ರಕರಣ ರಾಜ್ಯಾದ್ಯಂದ ಭಾರಿ ಸುದ್ದಿ ಮಾಡಿತ್ತು. ಕೆ.ಕಲ್ಯಾಣ ನೀಡಿದ ದೂರಿನ ಮೇರೆಗೆ ಕಲ್ಯಾಣ ಪತ್ನಿ ಅಶ್ವಿನಿ ಕಲ್ಯಾಣ ರನ್ನ ಪತ್ತೆಹಚ್ಚಿದ ಬೆಳಗಾವಿಯ ಮಾಳಮಾರುತಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ವಾಲಿ ಯನ್ನು  ಬಂಧಿಸಿ ಜೈಲಿಗಟ್ಟಿದ್ದರು. ಇನ್ನು ಪ್ರಕರಣದಲ್ಲಿ ಶಿವಾನಂದ ವಾಲಿ ಮಂತ್ರ-ತಂತ್ರದ ಮೂಲಕ ಅಶ್ವಿನಿ ಕಲ್ಯಾಣ ಕುಟುಂಬಸ್ಥರಿಗೆ ವಂಚಿಸಿ ಹಣ, ಆಸ್ತಿ ಲಪಟಾಯಿಸಿರೋದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾಳಮಾರುತಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ಶಿವಾನಂದ ವಾಲಿಯನ್ನು ಅಕ್ಟೋಬರ್12 ನೇ ತಾರೀಖಿನ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿ ಶಿವಾನಂದ ವಾಲಿ ಪೊಲೀಸ್ ಕಸ್ಟಡಿಗೆ

ಮಂಗಳವಾರ 6ನೇ ತಾರೀಖು ಸಂಜೆ ಕಸ್ಟಡಿಗೆ ಪಡೆದ ಪೊಲೀಸರು ನಿನ್ನೆ ಬುಧವಾರ ಆರೋಪಿ ಶಿವಾನಂದ ವಾಲಿಯನ್ನು ಆತನ ಊರು ಬಾಗಲಕೋಟೆ ಜಿಲ್ಲೆಯ ಬಿಳಗಿ ಪಟ್ಟಣದಕ್ಕೆ ಕರೆದೊಯ್ದು ಇಡಿ ದಿನ ಫುಲ್ ಡ್ರಿಲ್ ನಡೆಸಿದ್ದಾರೆ. ಅಶ್ವಿನಿ ಕಲ್ಯಾಣ ಕುಟುಂಬಸ್ಥರಿಗೆ ಮಾಡಿದ ವಂಚನೆ ಸೇರಿದಂತೆ ಇನ್ನೂ ಮತ್ಯಾರು ಆರೋಪಿಯಿಂದ ವಂಚನೆಗೆ ಒಳಗಾಗಿದ್ದಾರೆ ಎಂಬ ಅಂಶವನ್ನು ಬಾಯಿಬಿಡಿಸುತ್ತಿದ್ದು, ಆತ ಮಾಡುತ್ತಿದ್ದ ಮಂತ್ರ-ತಂತ್ರದ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬಿ.ಆರ್.ಗಡ್ಡೇಕರ್. ಪೊಲೀಸ್ ಇನ್ಸ್ಪೆಕ್ಟರ್

ಸತತ ಎರಡನೇ ದಿನವೂ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್  ಆರೋಪಿಗೆ ಫುಲ್-ಡ್ರಿಲ್ ನಡೆಸಿದ್ದು, ಶಿವಾನಂದ ವಾಲಿ, ಹಣ, ಮನೆ ಆಸ್ತಿ ಸೇರಿದಂತೆ ಇತರೆ ವಂಚನೆ ಪ್ರಕರಣದ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇನ್ನು ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿ ಶಿವಾನಂದ್ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಕರಣದ ಮತ್ತೋರ್ವ ಆರೋಪಿ ಕೆ.ಕಲ್ಯಾಣ ಬೆಂಗಳೂರಿನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡು ಈ ಎಲ್ಲ ಪ್ರಹಸನಕ್ಕೆ ಕಾರಣಳಾದ ಗಂಗಾ ಕುಲಕರ್ಣಿ ನಾಪತ್ತೆಯಾಗಿ ತಲೆಮೆರೆಸಿಕೊಂಡಿದ್ದು, ಗಂಗಾ ಪತ್ತೆಕಾರ್ಯವನ್ನ ಮಾಳಮಾರುತಿ ಪೊಲೀಸರು ನಡೆಸಿದ್ದು, ಗಂಗಾ ಕುಲಕರ್ಣಿಯನ್ನ ಪತ್ತೇ ಹಚ್ಚೋದೇ ಸಧ್ಯ ಪೊಲೀಸರಿಗೆ ಸವಾಲ್ ಆಗಿದೆ.

error: Content is protected !!