ಕೂಗು ನಿಮ್ಮದು ಧ್ವನಿ ನಮ್ಮದು

ಅನರ್ಹ ಶಾಸಕರಿಗೆ 25 ಕೋಟಿ ಸಂದಾಯ, ದಿನೇಶ್ ಗುಂಡೂರಾವ್ ಆರೋಪಕ್ಕೆ ಡಿಸಿಎಂ ಅಶ್ವಥ್ ನಾರಾಯಣ ತುರುಗೇಟು

ಮಂಗಳೂರು: ಅನರ್ಹ ಶಾಸಕರಿಗೆ ಬಿಜೆಪಿಯಿಂದ 25 ಕೋಟಿ ಸಂದಾಯ ಆರೋಪ ವಿಚಾರ KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಡಿಸಿಎಂ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ದಿನೇಶ್ ಗುಂಡೂರಾವ್ ಲೆಕ್ಕಾಚಾರ ಹೆಚ್ಚು ಕಡಿಮೆ ಆಗಿದೆ. ಆಗ ಅಧಿಕಾರ ಮತ್ತು ಹಣ ಕಾಂಗ್ರೆಸ್ ನಲ್ಲೇ ಇತ್ತು. ಹಣವೇ ಮುಖ್ಯ ಆಗಿದ್ರೆ ಕಾಂಗ್ರೆಸ್ ಅವರನ್ನು ಸರಿ ಮಾಡುತ್ತಿತ್ತು ಎಂದಿದ್ದಾರೆ. ಇನ್ನು ಡಿಕೆಶಿಯಂಥವರಲ್ಲಿ ಅಂಥ ಶಕ್ತಿ , ಪ್ರಭಾವ ಇತ್ತು. ಅನರ್ಹ ಶಾಸಕರು ಹಣಕ್ಕಾಗಿ ಬಿಜೆಪಿಗೆ ಬಂದಿಲ್ಲ. ಕಾಂಗ್ರೆಸ್ ನಡೆದುಕೊಳ್ಳುವ ರೀತಿಯಿಂದ ಪಕ್ಷ ಬಿಟ್ಟು ಬಂದಿದ್ದಾರೆ. ಎಲ್ಲಾ ಬಲಿಷ್ಠ ಶಾಸಕರೇ ಬಿಜೆಪಿಗೆ ಬಂದಿದ್ದಾರೆ ಎಂದಿರುವ ಅವರು ಹಣಕ್ಕಾಗಿ ಆಗಿದ್ರೆ ಬಿಜೆಪಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲೇ ಸರ್ಕಾರ ಉಳಿಸಿಕೊಳ್ತಿತ್ತು. ಆಗ ಕೇವಲ 7 ಮಂದಿ ಶಾಸಕರು ಮಾತ್ರ ಬೇಕಾಗಿತ್ತು. ಇನ್ನೂ ಮೂರು ವರ್ಷ ಬಿಜೆಪಿ ಸರ್ಕಾರ ಇರಲಿದೆ. ಕಾಂಗ್ರೆಸಿಗೆ ಆಗೋದಾದ್ರೆ ನಮ್ಮವರ ಮೇಲೆ ಹಣದ ಪ್ರಯೋಗ ಮಾಡಲಿ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
error: Content is protected !!