ಕೂಗು ನಿಮ್ಮದು ಧ್ವನಿ ನಮ್ಮದು

ಅಥಣಿ ಪೋಲಿಸರ ಭರ್ಜರಿ ಕಾರ್ಯಾಚರಣೆ 18 ಕೆಜಿ ಗಾಂಜಾ ಜಪ್ತಿ ಆರೋಪಿಯ ಬಂಧನ

ಚಿಕ್ಕೋಡಿ: ಒಂದು ಕಡೆ ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ದಿನಗಳೆದಂತೆ ಡ್ರಗ್ಸ ಜಾಲದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿದೆ. ಇನ್ನೊಂದೆಡೆ ಗಡಿಭಾಗದ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ತಾಲೂಕಿನ ಹಲವಡೆ ಪೋಲಿಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅಥಣಿ ಡಿಎಸ್ಪಿ ಎಸ್.ವಿ.ಗಿರೀಶ ಹಾಗೂ ಸಿಪಿಐ ಶಂಕರಗೌಡಾ ಬಸನಗೌಡರ, ಪಿಎಸ್ಐ ಕುಮಾರ್ ಹಾಡಕಾರ್ ಇವರ ನೇತೃತ್ವದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಎಚ್‌ಸಿ ಮಾಯಪ್ಪಾ ದೊಡಮನಿ
ಅಣ್ಣಾಸಾಬ ಈರಕರ, ಕೆ.ಬಿ.ಶಿರಗೂರ, ಎಸ್.ಜಿ.ಮನ್ನಾಪೂರ ಇವರನ್ನೊಳಗೊಂಡ ತಂಡವು ಆರೋಪಿ ಕರೆಪ್ಪ ಶ್ರೀಪಣ್ಣ ಐನಾಪೂರೆ ಉರ್ಪ್ ದೇವಕತೆ ಸಾ:ಹಣಮಾಪೂರ ಹಾಲಿ ಮದಬಾವಿ ಕುಂಬಾರ ಗುತ್ತಿ ನಿವಾಸಿ.

ಇತನು ಯಾವುದೇ ಪಾಸ್ ಮತ್ತು ಪರ್ಮಿಟ ಇಲ್ಲದೇ ಅಕ್ರಮವಾಗಿ ಗಾಂಜಾ ಗಿಡಗಳನ್ನು ತನ್ನ ಜಮೀನದಲ್ಲಿ ಬೆಳಿಸಿ ಅವುಗಳನ್ನು ಕಿತ್ತು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯ ಮುಂದೆ ಇಟ್ಟು ಕೊಂಡಾಗ ದಾಳಿ ಮಾಡಿ ಬಂಧಿಸಲಾಗಿದೆ. ಈ ವೇಳೆ ಸುಮಾರು 2,70,000/-ರೂ ಕಿಮ್ಮತ್ತಿನ 18 ಕೆಜಿ ತೂಕದ ಗಾಂಜಾ ಜಪ್ತ ಮಾಡಿ ವಶಕ್ಕೆ ಪಡೆದು ಸದರಿ ಆರೋಪಿತನನ್ನು ದಸ್ತಗೀರ ಮಾಡಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 308/2020 ಕಲಂ 20 (ಎ (1) (ಬಿ(ii) (ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದಾರೆ.

error: Content is protected !!